Showing posts with label ಮರೆಯದಿರು ಮರೆಯದಿರು ಮಾರಮಣನೇ vyasa vittala satyabodha teertha stutih. Show all posts
Showing posts with label ಮರೆಯದಿರು ಮರೆಯದಿರು ಮಾರಮಣನೇ vyasa vittala satyabodha teertha stutih. Show all posts

Friday, 27 December 2019

ಮರೆಯದಿರು ಮರೆಯದಿರು ಮಾರಮಣನೇ ankita vyasa vittala satyabodha teertha stutih

ಮರೆಯದಿರು ಮರೆಯದಿರು ಮಾರಮಣನೇ ಪ

ಗುರು ಸತ್ಯಬೋಧಾರ್ಯ ವರದ ರಘುರಾಮಾ ಅ.ಪ.

ವನ ವನಂಗಳ ತಿರುಗಿ | 
ಹಣ್ಣು ಹಂಪಲ ಮೆದ್ದುದಣುವಾದ ಪಾಡು ನಿನಗರಿಕಿಲ್ಲವೇ ||
ದಿನ ದಿನದಿ ಚಿತ್ರ ವಿಚಿತ್ರ ಭೋಜ್ಯಗಳನ್ನುಕ್ಷಣ ಬಿಡದೆ ಕೈಕೊಂಬ | 
ಘನ ಗರ್ವದಿಂದೆನ್ನ1

ನಾರ ವಸ್ತ್ರವನುಟ್ಟು | 
ತಲೆ ಜಡೆ ಗಟ್ಟಿದುದುತೋರದೇನೊ ನಿನ್ನ ಮನಸಿಗಿಂದೂ ||
ಮೇರೆಯಿಲ್ಲದ ಪದಕ | 
ವಜ್ರ ಮಣಿ ಮಕುಟಗಳಭಾರವನು ನೀ ವಹಿಸಿ | 
ಬಹು ಬಿಂಕವನೆ ತಾಳೀ 2

ಅರ್ಭಕನ ತೆರನಂತೆ | 
ದರ್ಭೆ ಹಾಸಿಕೆ ಮೇಲೆಗುಬ್ಬಿಯಂದದಿ ಮಲಗಿದುದು ಮರತೆಯಾ ||
ಲಭ್ಯವಾದಾ ಹೇಮ ತೊಟ್ಟಿಲೊಳು ನೀ ಮಲಗಿಉಬ್ಬಿ ಓಲಗಗೊಂಬ ಉತ್ಸಾಹದಿಂದೆನ್ನ 3

ಹೆಂಡತಿಯ ಕಳಕೊಂಡು | 
ಕಂಡ ಕಂಡವರಿಗೇಅಂಡಲಿದ ಮಾತುಗಳು ಅನಲೇತಕೇ ||
ಮಂಡಿತಾದಾಭರಣ | 
ಮತ್ತೆ ಎಡದಲಿ ಸತಿಯುಕಂಡು ಸುಖ ಬಡುವಂಥ | 
ಕಳವಳಿಕೆಯಿಂದೆನ್ನ 4

ಈಗಲೀ ಸತ್ಯಬೋಧರ ಬಳಿಯಲಿರಲಾಗಿನೀಗಿ ಹೋಯಿತೆ ನಿನ್ನ ಪಡಿಪಾಟಲೂ ||
ಆಗೀಗಲೆನ್ನದೇ ಕ್ಷಣ ಬಿಡದೆ ಕೈಕೊಂಡು ವೈಭೋಗ ಬಡುವುದೂ ಮೊದಲಿಗಿದ್ದಿಲ್ಲ 5

ನಮ್ಮ ಗುರುಗಳು ನಿಮಗೆ | 
ಈ ಪರೀಯುಪಚಾರಘಮ್ಮನೇ ಮಾಡಲೂ ಘನತೆಯಿಂದಾ ||
ನಮ್ಮ ಸಾಕದೆ ಇನಿತು ದೂರ ಮಾಳ್ಪುದು ನಿನಗೆಧರ್ಮವಲ್ಲವೊ ಸ್ವಾಮಿ ದಯದದಿಂದ ನೋಡೆಮ್ಮ 6

ಸಾಕಾರ ರೂಪ ಸರ್ವೋತ್ತಮನೆ ವೈಕುಂಠಬೇಕಾಗಲಿಲ್ಲ ಹೊಸ ಪರಿ ಭಾಗ್ಯವೂ ||
ಯಾಕೆ ಭಕುತರ ಮಾತು ನಿರಾಕರಿಸಿ ಬಿಡುವುದೂಶ್ರೀಕಾಂತ ಎರಗುವೆ ವ್ಯಾಸ ವಿಠಲ ರೇಯಾ 7
***********