Showing posts with label ತಾಂಡವಾಡಿದನಂದು ಯಶೋದೆಕಂದ prasannavenkata. Show all posts
Showing posts with label ತಾಂಡವಾಡಿದನಂದು ಯಶೋದೆಕಂದ prasannavenkata. Show all posts

Monday, 11 November 2019

ತಾಂಡವಾಡಿದನಂದು ಯಶೋದೆಕಂದ ankita prasannavenkata

by ಪ್ರಸನ್ನವೆಂಕಟದಾಸರು
ತಾಂಡವಾಡಿದನಂದು ಯಶೋದೆಕಂದ ಪ.

ಅಂದದಿ ಬೆಣ್ಣೆಯ ಪಿಡಿದು ಶುದ್ಧಗತಿಗಳಿಂದ ತಗಡಧಂ ಧಾಂ ಧಿಮಿಕಿಟ ಧಿಗಿ ಧಿಗಿ ಥೈಯೆಂದು 1

ಕುಚಮಾಟದ ಗದ್ದಿಗೇಲಿ ಒಂದಡಿಯಿಟ್ಟ ತಾಳನಿಚಯದಿ ತತ್ತಂ ತಾಹಂ ಥರಿಕುಟ ತಕುಂದ ಕಿಡಿಕಿಟಿಲೆಂದು 2

ಕಂಕಣ ಕುಂಡಲಹಾರ ಪದಕ ದಾಮಾಲಂಕೃತಕಿಂಕಿಣಿಕಿಣಿ ಝಣ ಎನೆ ವನಜನಯನನು3

ಅಜಭವಾದ್ಯರು ತಾಳ ವೀಣೆ ಆವುಜ ಮೃದುಋಜು ಧಳಂ ಧಳಂ ಝೈಂ ಝೈಂ ಝಕಿಂ ನುಡಿಸೆ ಜಡಿಜಡಿದೆÉೂಡನೆ 4

ಮಂದಹಾಸದಿ ನಂದವ್ರಜದ ಗೋವರ ಕೂಡತಂದೆ ಪ್ರಸನ್ನವೆಂಕಟಗಿರಿತಟಸ್ಫುಟಿದ್ಧಾಟಕನಿಲಯ5
******