..
kruti by radhabai
ರಕ್ಷಿಸು ಶ್ರೀ ವೆಂಕಟೇಶಾ ನಿನ್ನ ನಂಬಿದೆನೈ ಶ್ರೇಷಗಿರಿವಾಸಾ ಪ
ವರ ಋಷಿಗಳು ಕೂಡೀ ಸರ್ವೋತ್ತಮನಾರೆಂದು
ತಿಳಿಯಲು ಬೇಗಾ ಭೃಗು ಮುನಿತಾ ಬಂದೂ
ಶ್ರೀ ಹರಿ ಮಲಗಿರಲಂದೂ ತಾಡನೆ ಮಾಡಿದನೆಂದೂ 1
ಅದು ಕೇಳಿ ಸಿರಿದೇವಿ ಸೈರಿಸಲಾರದೆ
ನಡೆದಳು ಕೊಲ್ಲಾಪುರಕೆ ತಾನಾಗಾ
ತಿಳಿದು ಹರಿಬೇಗಾ ಧರೆಗಿಳಿದನು ಆಗಾ 2
ಪರಿಪರಿಭಕ್ತರಾ ಪೊರೆಯ ಬೇಕೆನುತಲಿ
ಧರೆಗಿಳಿದು ಬಂದೂ ಬೆಟ್ಟದೊಳ್ ನಿಂದಾ
ಸುರಮುನಿವಂದ್ಯ ಶರಣು ಗೋವಿಂದಾ 3
ದೇಶದೇಶಗಳಿಂದಾ ಭಕ್ತಜನರು ಬಂದೂ
ಕಾಣಿಕೆಗಳ ತಂದೂ ಅರ್ಪಿಸುವರು ದೇವಾ
ಮಹಾನುಭಾವಾ ಪಾಲಿಸುದೇವಾ 4
ಅಪ್ಪಲು ಅಕಿರಸಿ ಒಪ್ಪದಿಂದಲಿಮಾರಿ
ಕೊಪ್ಪರಿಗೆ ಹಣ ತುಂಬಿಸಿಕೊಂಡು ಸೇವೆಕೈ ಕೊಂಡ್ಯಾ ನಿನ್ನ
ಸರಿಯಾರಿಲ್ಲ ಕಂದ್ಯ5
ಮೋಸ ಹೋಗುವನಲ್ಲಾ ಭವಪಾಶ ಬಿಡಿಸಲು ಬಲ್ಲ
ಈಸು ಮಹಿಮೆಗಾರ ಶ್ರೀಲಕ್ಷ್ಮೀನಲ್ಲ ಕೈಬಿಡನಲ್ಲ
ಇದಕೆ ಸಂಶಯವಿಲ್ಲ 6
ದಾನವಾಂತಕ ನಿನ್ನಾ ದಯವಾದ ಮೇಲಿನ್ನಾ
ಬೇರೆ ದೈವಗಳನ್ನ ಬಯಸಲ್ಯಾತಕೆ ಹೇಳು
ದೀನ ದಯಾಳೂ ಭಕ್ತಕೃಪಾಳೂ 7
ನಿನ್ನ ಹೊರತು ಪೊರೆವರನ್ಯರಕಾಣೆನು ಘನ್ನ ಮಹಿಮಾ
ಶ್ರೀ ಕರುಣಾ ಸಂಪನ್ನಾ ತಡವ್ಯಾಕೊ ಪ್ರಸನ್ನಾ
ಮನಮಾಡೋ ಮೋಹನ್ನಾ 8
ಭಕ್ತ ವತ್ಸಲ ನೀನಭಯವಿತ್ತ ಮೇಲೆ ಭಯವ್ಯಾಕೊನಮಗಿನ್ನು
ಭಕ್ತರಭಿಮಾನೀ ಸತ್ಯ ನಿನವಾಣೀ ನಿನ್ನ ಸಮರ್ಯಾರೊದಾನೀ 9
ಆದರದಿಂಧ ಪೊರೆವಾಪ್ರೇಮಸುಧೆಯ ಕರೆವಾ
ಕಾಮಿತ ಫಲಗಳ ಕರೆದುತಾ ಕೊಡುವಾ
ಕನಕಾದ್ರಿಯೊಳಿರುವಾ ಕೀರ್ತಿಯೊಳ್ ಮೆರೆವಾ 10
ಕಷ್ಟಗಳನೆ ಕಳೆದಿಷ್ಟಾರ್ಥ ಕೊಡುವಾ ಸೃಷ್ಟಿಗೊಡೆಯ ಶ್ರೀ
ವೆಂಕಟವಿಠಲಾ ಕರುಣಾಲವಾಲಾ ಪದ್ಮಿನಿಲೋಲಾ 11
***