Showing posts with label ನಂದನಂದನ ಪದ್ಮಾನಂದನ ವಂದ್ಯನೇ gurumahipati. Show all posts
Showing posts with label ನಂದನಂದನ ಪದ್ಮಾನಂದನ ವಂದ್ಯನೇ gurumahipati. Show all posts

Wednesday, 1 September 2021

ನಂದನಂದನ ಪದ್ಮಾನಂದನ ವಂದ್ಯನೇ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಂದನಂದನ ಪದ್ಮಾನಂದನ ವಂದ್ಯನೇ| 

ತಂದೆ ಮಹಿಪತಿಸುತ ಪ್ರಭುವೇ ಮುಕುಂದ ಕೃಷ್ಣ ಪ 


ಸಿರಿಯಾ ಸೌಖ್ಯ ದಿಂದುಬ್ಬಿ ಮದದಿಂದ| ಸರಿಯನಗಾರು ಇಲ್ಲೆಂಬ ತಾಮಸದಿಂದ| ಮರದೆನೋ ಹರಿನಿಮ್ಮಾ ಸ್ಮರಣೆಯಾ ಮರವಿಂದ| ತಿರುಗಿ ದಣಿದೆ ನಾನು ನಾನಾಯೋನಿಗಳಿಂದ| ತರಹರಿಸಲಾರೆ ತಾಪತ್ರಯದುಃಖಗಳಿಂದ| ಶಿರಿಕೃಷ್ಣ ಸಲಹೆನ್ನ ಪರಮ ಕರುಣದಿ|1 

ಮುನ್ನ ಮಾಡಿದಪರಾಧ ಸಕಲವ ನೀನು ಕ್ಷಮೆಯನುಮಾಡಿ ಚಿನ್ನ ಕಿಂಕರನೆಂದು ದಯದಲಿ ಅಭಯಕರವನು ನೀಡಿ ನಿನ್ನ ಸ್ಮರಣೆಯಕೊಟ್ಟು ಕರುಣ ಕಟಾಕ್ಷದಿಂದಲಿ ನೋಡಿ ಚಿನ್ನ ಶ್ರೀಕೃಷ್ಣ ಭವದಿಂದುದ್ಧರಿಸಯ್ಯಾ ತಾರಿಸಯ್ಯಾ ನೀನು2 

ಪತಿತ ಪಾವನ ನೆಂಬಾಬಿರುದು ಸಾರುತಿದೆ ಗತಿಗೆಟ್ಟ ಅಜಮಿಳನ ತಾರಿಸಲಿಲ್ಲವೇ ಪಾಷಾಣ ಉದ್ದರಿಸಲಿಲ್ಲವೇ ಕ್ಷಿತಿಯೊಳೆನ್ನ ತಾರಿಸುವದೊಂದರಿದೇ ಶ್ರೀಕೃಷ್ಣಾ3 

ಕರಿರಾಜನಂದದಿ ಹರಿತವಸ್ಮರಣೆ ಮಾಡಲರಿಯೇ ಶರಣ ಪ್ರಲ್ಹಾದನಂತೆ ಕರೆಯ ಬರಿಯೇ ನರೆನಂತೆ ನಾನಿನ್ನ ವಲಿಸಿಕೊಳ್ಳಲರಿಯೇ ತರಳ ಧ್ರುವನಂತೆ ಧ್ಯಾನಿಸಲರಿಯೇ ಶಿರಿಕೃಷ್ಣಾ ಗತಿಯಂಬದುವಿನಾ ಮತ್ತೊಂದರಿಯೇ 4 

ನಿನ್ನ ನಾಮವನು ಕೊಂಡಾಡುವೆ ಪೊಗಳುವೆ ಚನ್ನಾಗ್ಯನುದಿನದಲನವರತಾ ತನ್ನಯಕರುವಿಗೆ ಕರುಣಿಪಗೋಪಂತೆ ಎನ್ನ ನೀಸಲಹುದು ಶಿರಿಕೃಷ್ಣರೇಯಾ5

***