Showing posts with label ಎಲೆ ಮನಾ ವ್ಯರ್ಥಗಳೆವರೇ ಜನುಮವನು gurumahipati. Show all posts
Showing posts with label ಎಲೆ ಮನಾ ವ್ಯರ್ಥಗಳೆವರೇ ಜನುಮವನು gurumahipati. Show all posts

Wednesday 1 September 2021

ಎಲೆ ಮನಾ ವ್ಯರ್ಥಗಳೆವರೇ ಜನುಮವನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎಲೆ ಮನಾ ವ್ಯರ್ಥಗಳೆವರೇ ಜನುಮವನು | ನೆಲಿಯ ನಿನ್ನರುವದಾ ಹೊಲಬು ಮರೆದು ಪ 


ಇಳಿಯೊಳಗ ನರದೇಹದಲಿ ಜನಿಸಿ ಕೊಡುವದು | ಸುಲಭವಲ್ಲವೊ ಹೋದ ಬಳಿಕ ನಿನಗದು ಮುಂದ ಅ.ಪ 


ಮೇದಿನಿಯೊಳಗ ಮಿಗಿಲಾದ ಜನ್ಮದಿ ಬಂದು| ಐದಿದಾವರ್ಣ ಕರ್ಮಾಧರಿಸಿ ಮಾಡುತಲಿ | ಗೈದು ನಿತ್ಯಾನಿತ್ಯ ವೈದಿಕ ವಿಚಾರವನು | ಆದಿ ಪುರುಷನ ಕಾಂಬ ಹಾದಿ ಕೂಡಿ | ಖೇದವನು ಕುಡುವ ವಿವಾದ ಗುಣವನೆ ನೀಗಿ | ಮೋದದಲಿ ಶರಣ್ಹೊಕ್ಕು ಸಾಧು ಜನರನು ಸರಿಸಿ | ವೇದಾಂತ ಬ್ರಹ್ಮ ಸೂತ್ರಾದಿ ವಾಕ್ಯಾರ್ಥವನು 1 

ಬೋಧೆಯಲಿ ಪಡೆದು ಜ್ಞಾನೋದಯ ಕಾಣದೆ ಭವ ಶರಧಿಯನು ಗೆಲಲಾಗಿ | ಶರಣ ಜನರಿಗೆ ತೆಪ್ಪ ಪರಿಯಂದಾತಾಗಿಹ | ಹರಿನಾಮವ ನೆನೆದು ಹರಿಧ್ಯಾನಗೈವುತಲಿ | ಹರುಷದಲಿ ಪದಿನಾರು ತೆರ ಪೂಜಿಸಿ | ಪರಮ ಸದ್ಭಾವದಲಿ ಗುರುಡಿಂಗರ ಮೇಳದಲಿ | ಭರದಿ ತಾಳದಂಡಿಗೆಯ ಕರದೊಳಗ ತಾ ಪಿಡಿದು | ಶರೀರ ಭಾವನೆ ಮರೆದು ಭರಿತ ಪ್ರೇಮಿತನಾಗಿ | ಇರಳು ಹಗಲು ಪಾಡುತಲಿ ಹರಿಭಕ್ತನಾಗದೇ 2 

ವನಧಿಯೊಳು ಥೆರೆಸಂಗ ಧನುಮತದಿದೋರ್ವ | ಗುಳ್ಳಿಯ ಪರಿಸೇವೆಯೀತನು ವೆಂದು-ದರಿಯು | ಆನದೊಳಗ ಉತ್ಕ್ರಷ್ಟ ತನದಿ ಮೆರೆಸ್ಯಾಡುತಿಹ | ಕನಕದಧಿದೇವಿ ಕಿವಿಯನು ಬೀಸುವಾಗ | ಅಣುಗ ಕರಿಯಂತೆ ಅರಕ್ಷಣದವಳು ಯಂದು ಅತಿ | ಹೆಣಗುತಿಹ ಸಾಯಾಸವನೆ ತ್ಯಜಿಸಿ ತಾ ದೊರಕಿ | ಧನಿತದರಿಂತುಷ್ಟವನು ಕರಿಸಿ ದೃಢದಿಂದ | ಘನ ನಂಬು ಗುರು ಮಹಿಪತಿ ಚರಣ ಬಿಡದಂತೆ 3

***