Showing posts with label ಏಕೆ ಮಮತೆ ಕೊಟ್ಟು ದಣಿಸುವಿ ರಂಗ ankita gopala vittala EKE MAMATE KOTTU DANISUVI RANGA. Show all posts
Showing posts with label ಏಕೆ ಮಮತೆ ಕೊಟ್ಟು ದಣಿಸುವಿ ರಂಗ ankita gopala vittala EKE MAMATE KOTTU DANISUVI RANGA. Show all posts

Wednesday 22 December 2021

ಏಕೆ ಮಮತೆ ಕೊಟ್ಟು ದಣಿಸುವಿ ರಂಗ ankita gopala vittala EKE MAMATE KOTTU DANISUVI RANGA








ಏಕೆ ಮಮತೆ ಕೊಟ್ಟು ದಣಿಸುವಿ ರಂಗ

ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪ. ||

ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ–
ಗೆನ್ನನೊಪ್ಪಿಸುವುದು ನೀತವೆ
ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ
ನಿನ್ನ ನೇಮಕೆ ಪ್ರತಿಕೂಲನೆ || ೧ ||

ತನುವು ತನ್ನದು ಅಲ್ಲ ತನು ಸ೦ಬ೦ಧಿಗಳೆ೦ಬೋ
ತನುವ್ಯಾರೊ ತಾನ್ಯಾರೊ ಅವರಿಗೆ
ಧನ ಮೊದಲಾದ ವಿಷಯಗಳ ಅನುಭವ
ಹಿ೦ದಿನ ದೇಹದ೦ತಲ್ಲವೆ || ೨ ||

ಇ೦ದ್ರಿಯ೦ಗಳು ವಿಷಯದಿ೦ದ ತೆಗೆಯಲು
ಗೋವಿ೦ದ ಎನ್ನ ವಶಕೆ ಬಾರವೊ
ಇ೦ದಿರೆ ಅರಸ ಬ್ರಹ್ಮಾದಿವ೦ದಿತ ನಿನ್ನ
ಬ೦ಧಕಶಕುತಿಗೆ ನಮೋ ನಮೋ || ೩ ||

ಅರಿತು ಅರಿತು ಎನಗರೆಲವವಾದರು
ವಿರಕುತಿವಿಷಯದಿ ಬಾರದು
ಕರುಣಾಸಾಗರ ನಿನ್ನ ಮರೆಹೊಕ್ಕಲ್ಲದೆ
ಮರುಳು ನೀಗುವ ಬಗೆಗಾಣೆನೊ || ೪ ||

ಎ೦ದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ
ಅ೦ದೆ ಉದ್ಧರಿಸಯ್ಯ ಕರುಣಿಯೆ
ಸು೦ದರ ವಿಗ್ರಹ ಗೋಪಾಲವಿಠಲ ಸುಖ
ಸಾ೦ದ್ರ ಭವಮೋಚಕ ನಮೋ ನಮೋ || ೫ ||
***

Eke mamate kottu danisuvi ranga
Ni karunadi enna paliso krushna || pa. ||

Ninna hambalisade anya vishayagali-
Gennanoppisuvudu nitave
Mannisi dayadi ni enna palisalu na
Ninna nemake pratikulane || 1 ||

Tanuvu tannadu alla tanu sambandhigalembo
Tanuvyaro tanyaro avarige
Dhana modalada vishayagala anubava
Himdina dehada0tallave || 2 ||

Imdriyamgalu vishayadi0da tegeyalu
Govimda enna vasake baravo
Imdire arasa brahmadivandita ninna
Bandhakasakutige namo namo || 3 ||

Aritu aritu enagarelavavadaru
Virakutivishayadi baradu
Karunasagara ninna marehokkallade
Marulu niguva bageganeno || 4 ||

Endige ninna cittakke baruvudo svami
Ande uddharisayya karuniye
Sundara vigraha gopalavithala suka
Sandra bavamocaka namo namo || 5 ||
***

ಏಕೆ ಮಮತೆ ಕೊಟ್ಟು ಧಣಿಸುವಿ ರಂಗ| 
ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ ||ಪ||

ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ| 
ಗೆನ್ನನೊಪ್ಪಿಸುವುದು ನೀತವೆ| 
ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ| 
ನಿನ್ನ ನೇಮಕೆ ಪ್ರತಿಕೂಲನೆ ||೧||

ತನುವು ತನ್ನದು ಅಲ್ಲ ತನುಸಂಬಂಧಿಗಳೆಂಬೋ| 
ತನುವ್ಯಾರೊ ತಾನ್ಯಾರೊ ಅವರಿಗೆ| 
ಧನ ಮೊದಲಾದ ವಿಷಯಗಳ ಅನುಭವ ಹಿಂ| 
ದಿನ ದೇಹದಂತಲ್ಲವೆ ||೨||

ಇಂದ್ರಿಯಂಗಳು ವಿಷಯದಿಂದ ತೆಗೆಯಲು ಗೋ| 
ವಿಂದ ಎನ್ನ ವಶಕೆ ಬಾರವೊ| 
ಇಂದಿರೆ ಅರಸ ಬ್ರಹ್ಮಾದಿವಂದಿತ ನಿನ್ನ| 
ಬಂಧಕ ಶಕುತಿಗೆ ನಮೋನಮೋ ||೩||

ಅರಿತು ಅರಿತು ಎನಗೆದವಲಾದರು| 
ವಿರಕುತಿ ವಿಷಯದಿ ಬಾರದು| 
ಕರುಣಸಾಗರ ನಿನ್ನ ಮೊರೆಹೊಕ್ಕಲ್ಲದೆ| 
ಮರುಳು ನೀಗುವ ಬಗೆಗಾಣೆನೊ ||೪||


ಎಂದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ| 
ಅಂದೆ ಉಧ್ಧರಿಸಯ್ಯ ಕರುಣಿಯೆ| 
ಸುಂದರ ವಿಗ್ರಹ ಗೋಪಾಲವಿಠ್ಠಲ ಸುಖ| 
ಸಾಂದ್ರ ಭವಮೋಚಕ ನಮೋ ನಮೋ ||೫||
**********

ಏಕೆ ಮಮತೆ ಕೊಟ್ಟು ಧಣಿಸುವಿ ರಂಗ| ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ ||ಪ||

ನಿನ್ನ ಹಂಬಲಿಸದೆ ಅನ್ಯ ವಿಷಯಗಳಿ| ಗೆನ್ನನೊಪ್ಪಿಸುವುದು ನೀತವೆ| ಮನ್ನಿಸಿ ದಯದಿ ನೀ ಎನ್ನ ಪಾಲಿಸಲು ನಾ| ನಿನ್ನ ನೇಮಕೆ ಪ್ರತಿಕೂಲನೆ ||೧||

ತನುವು ತನ್ನದು ಅಲ್ಲ ತನುಸಂಬಂಧಿಗಳೆಂಬೋ| ತನುವ್ಯಾರೊ ತಾನ್ಯಾರೊ ಅವರಿಗೆ| ಧನ ಮೊದಲಾದ ವಿಷಯಗಳ ಅನುಭವ ಹಿಂ| ದಿನ ದೇಹದಂತಲ್ಲವೆ ||೨||

ಇಂದ್ರಿಯಂಗಳು ವಿಷಯದಿಂದ ತೆಗೆಯಲು ಗೋ| ವಿಂದ ಎನ್ನ ವಶಕೆ ಬಾರವೊ| ಇಂದಿರೆ ಅರಸ ಬ್ರಹ್ಮಾದಿವಂದಿತ ನಿನ್ನ| ಬಂಧಕ ಶಕುತಿಗೆ ನಮೋನಮೋ ||೩||

ಅರಿತು ಅರಿತು ಎನಗೆದವಲಾದರು| ವಿರಕುತಿ ವಿಷಯದಿ ಬಾರದು| ಕರುಣಸಾಗರ ನಿನ್ನ ಮೊರೆಹೊಕ್ಕಲ್ಲದೆ| ಮರುಳು ನೀಗುವ ಬಗೆಗಾಣೆನೊ ||೪||


ಎಂದಿಗೆ ನಿನ್ನ ಚಿತ್ತಕ್ಕೆ ಬರುವುದೊ ಸ್ವಾಮಿ| ಅಂದೆ ಉಧ್ಧರಿಸಯ್ಯ ಕರುಣಿಯೆ| ಸುಂದರ ವಿಗ್ರಹ ಗೋಪಾಲವಿಠ್ಠಲ ಸುಖ| ಸಾಂದ್ರ ಭವಮೋಚಕ ನಮೋ ನಮೋ ||೫||
*********