Showing posts with label ಹೌರನೆ ಮತಿಯಿತ್ತು ಸಲಬೇಕೆನ್ನ ಗೌರವ ಗಾತುರ ತೌರ ಮನೆ vijaya vittala. Show all posts
Showing posts with label ಹೌರನೆ ಮತಿಯಿತ್ತು ಸಲಬೇಕೆನ್ನ ಗೌರವ ಗಾತುರ ತೌರ ಮನೆ vijaya vittala. Show all posts

Thursday, 17 October 2019

ಹೌರನೆ ಮತಿಯಿತ್ತು ಸಲಬೇಕೆನ್ನ ಗೌರವ ಗಾತುರ ತೌರ ಮನೆ ankita vijaya vittala

ವಿಜಯದಾಸ
ಹೌರನೆ ಮತಿಯಿತ್ತು ಸಲಬೇಕೆನ್ನ ಪ

ಗೌರವ ಗಾತುರ ತೌರ ಮನೆಯ ಹರ
ಕೌರವಾಂತಕನೊಳು ಶೌರಿಯ ತೋರಿಸೋ ಅ.ಪ.

ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ
ತ್ರಿಗುಣಾತುವ ಗಾತುರ ಭಕ್ತ ಸಂಜೀವ
ನಿಗಮತುರಗ ಪಾವ ವನಮಾಲ ಪಾವಾ
ಮೃಗಪಾಣಿ ಮೃತ್ಯುಂಜಯ ಸುಪ್ರಭಾವ
ನಗೆಪಗೆ ಮಗನನು ಮೃಗನೆವನದಿ ಕಾ
ಅಗಣಿತ ಗುಣಮಣಿ
ವಾಲಗ ನಿನ್ನವರೊಳು
ಮಗಳೆ ಮಗುಳೆ ಕೊಡು ಗಗನೇಶ ಜನಕ 1

ಅವನಿಯೋಳ್ ಕೈಲಾಸ ವಾಸ ಅಪ್ರತಿ
ನವ ವಿಧ ಭಕುತಿ ಕೊಡು ಶಂಭು ಪಶುಪತಿ
ದಿವಸ ದಿವಸ ವೈಶ್ರವಣ ಬಾಂಧವ ದೇ
ಹವೆ ನಿನಗೊಪ್ಪಿತು ಅವನಿಯೊಳುತ್ತಮ
ಶ್ರವಣದೊಳಗೆ ರಾಘವನ ಕಥಾಮೃತ
ಸವಿದೋರುವುದೋ ಭುವನ ಪವಿತ್ರ 2

ಅಜಭೃಕುಟ ಸಂಭೂತ ಭೂತಗಣೇಶ
ಕುಂಡಲ ವಿಭೂತಿ ಭೂಪ
ನಿಜ ಮಹಾ ಸ್ಮಶಾನವಾಸ ಉಗ್ರೇಶ
ತ್ರಿಜಗಪಾವನ ಗಂಗಾಧರ ವಿಶ್ವೇಶ
ಸುಜನರ ಹೃದಯ ಪಂಕಜದೊಳ್ ಮಿನುಗುವ
ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ
ಭಜನೆಯ ಕೊಡು ಭೂಭುಜ ದೇವೋತ್ತಮ
ಗಜ ಅಜಿನಾಂಬರ 3
**********