Showing posts with label ತನು ನಿನ್ನದು ಜೀವನ ನಿನ್ನದು ಸ್ವಾಮಿ ಅನುದಿನದಿ ಬಾಹೊ neleyadikeshava TANU NINNADU JEEVANA NINNADU SWAMI ANUDINA BAAHO. Show all posts
Showing posts with label ತನು ನಿನ್ನದು ಜೀವನ ನಿನ್ನದು ಸ್ವಾಮಿ ಅನುದಿನದಿ ಬಾಹೊ neleyadikeshava TANU NINNADU JEEVANA NINNADU SWAMI ANUDINA BAAHO. Show all posts

Wednesday, 8 December 2021

ತನು ನಿನ್ನದು ಜೀವನ ನಿನ್ನದು ಸ್ವಾಮಿ ಅನುದಿನದಿ ಬಾಹೊ ankita neleyadikeshava TANU NINNADU JEEVANA NINNADU SWAMI ANUDINA BAAHO





ತನು ನಿನ್ನದು ಜೀವನ ನಿನ್ನದು ಸ್ವಾಮಿ
ಅನುದಿನದಿ ಬಾಹೊ ಸುಖ ದುಃಖ ನಿನ್ನದಯ್ಯ || ೧ ||

ಸವಿನುಡಿ ವೇದ ಪುರಾಣ ಶಾಸ್ತ್ರಗಳೆಲ್ಲ
ಕಿವಿಗೊಟ್ಟು ಕೇಳುವ ಸ್ಥಿತಿ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ || ೧ ||

ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲ
ಬಿಡದೆ ಲೇಪಿಸಿಕೊಂಬುವುದು ನಿನ್ನದು
ಷಡುರಸದನ್ನಕ್ಕೆ ನಲಿದಾಡುವ ಜಿಹ್ವೆ
ಕಡುರುಚಿಗೊಂಬುವ ಆ ಸವಿ ನಿನ್ನದಯ್ಯ || ೨ ||

ಮಾಯಪಾಶದ ಬಲೆಗೊಳು ಸಿಕ್ಕಿ ತೊಳಲುವ
ಕಾಯ ಪಂಚೇದ್ರಿಯದ ಗತಿ ನಿನ್ನದು
ಕಾಯಜಪಿತ ಕಾಗಿನೆಲೆಯಾದಿ ಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೇ || ೩ ||
***

Tanu ninnadu jeevana ninnadu ||p||

anudinadali baaho sukha dukha ninnadayya ||a.pa||

Savi nudi veda puraana shaastragala
Kivigottu keluva kathe ninnadu
Nava mohanaangera roopava kannali
Eve ikkade noduva nota ninnadayya ||1||

Vadagoodi gandha kasturi parimalangala
Bidade lepisikombuvadu ninnadu
Shadu rasadannakke nalidaaduva jivhe
Kadu ruchigondare aa ruchi ninnadayya ||2||

maaya paashada baleyolage silukiruvantha
Kaaya pancendriyangalu ninnavu
Kaaya japita kaagi neleyaadi keshava
Raaya neenallade nararu swatantrare ||3||
***