Wednesday 8 December 2021

ತನು ನಿನ್ನದು ಜೀವನ ನಿನ್ನದು ಸ್ವಾಮಿ ಅನುದಿನದಿ ಬಾಹೊ ankita neleyadikeshava TANU NINNADU JEEVANA NINNADU SWAMI ANUDINA BAAHO





ತನು ನಿನ್ನದು ಜೀವನ ನಿನ್ನದು ಸ್ವಾಮಿ
ಅನುದಿನದಿ ಬಾಹೊ ಸುಖ ದುಃಖ ನಿನ್ನದಯ್ಯ || ೧ ||

ಸವಿನುಡಿ ವೇದ ಪುರಾಣ ಶಾಸ್ತ್ರಗಳೆಲ್ಲ
ಕಿವಿಗೊಟ್ಟು ಕೇಳುವ ಸ್ಥಿತಿ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ || ೧ ||

ಒಡಗೂಡಿ ಗಂಧ ಕಸ್ತೂರಿ ಪರಿಮಳವೆಲ್ಲ
ಬಿಡದೆ ಲೇಪಿಸಿಕೊಂಬುವುದು ನಿನ್ನದು
ಷಡುರಸದನ್ನಕ್ಕೆ ನಲಿದಾಡುವ ಜಿಹ್ವೆ
ಕಡುರುಚಿಗೊಂಬುವ ಆ ಸವಿ ನಿನ್ನದಯ್ಯ || ೨ ||

ಮಾಯಪಾಶದ ಬಲೆಗೊಳು ಸಿಕ್ಕಿ ತೊಳಲುವ
ಕಾಯ ಪಂಚೇದ್ರಿಯದ ಗತಿ ನಿನ್ನದು
ಕಾಯಜಪಿತ ಕಾಗಿನೆಲೆಯಾದಿ ಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೇ || ೩ ||
***

Tanu ninnadu jeevana ninnadu ||p||

anudinadali baaho sukha dukha ninnadayya ||a.pa||

Savi nudi veda puraana shaastragala
Kivigottu keluva kathe ninnadu
Nava mohanaangera roopava kannali
Eve ikkade noduva nota ninnadayya ||1||

Vadagoodi gandha kasturi parimalangala
Bidade lepisikombuvadu ninnadu
Shadu rasadannakke nalidaaduva jivhe
Kadu ruchigondare aa ruchi ninnadayya ||2||

maaya paashada baleyolage silukiruvantha
Kaaya pancendriyangalu ninnavu
Kaaya japita kaagi neleyaadi keshava
Raaya neenallade nararu swatantrare ||3||
***

No comments:

Post a Comment