..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಕೈಲಾಸನಾಥ ಮಹೇಶ ಈಶ
ಶೈಲೇಶ ತನಯೇಶ ಬಾಲಾರ್ಕ ಸಮಭಾಸ ಪ
ಶೂಲಾಕ್ಷ ಡಮರುಗಳಿಂದ ಶೋಭಿಪ ಹಸ್ತ
ತಾಲಾಂಕನನುಜನೊಳ್ಸಮರಗೈದೀರ್ಪ
ಫಾಲಾಕ್ಷದಿಂದಲಿ ಕಾಮನ ದಹಿಸಿರ್ಪ
ಶೂಲಿಯ ಮಹಿಮೆಯನೇನು ಬಣ್ಣಿಸಲಿ 1
ವೈಷ್ಣವಾಗ್ರಣಿಯೆಂದು ಪೆಸರುಗೊಂಡಿರುವ
ವಿಷ್ಣುಭಕ್ತರೊಳಗತಿ ಪ್ರೇಮವಿರುವ
ಕೃಷ್ಣ ದ್ವೈಪಾಯನರ ಸುತರಾಗಿ ಶೋಭಿಪ
ಸನಕಾದಿಗಳ ಶಿಷ್ಯ ದುರ್ವಾಸರೆನಿಪ 2
ನಂಜುಂಡನೆನಿಸಿರ್ಪ ಪ್ರಖ್ಯಾತ ಮಹಾದೇವ
ಕಂಜಜಾತನ ಸುತನೆನಿಸಿರ್ದ ದೇವ
ರಾಜೇಶ ಹಯಮುಖ ಭಕ್ತಪುಂಗವ ನೀನು
ಅಂಜಲಿ ಬಂಧದಿಂ ನಮಿಪೆ ನಿನ್ನಡಿಗೆ 3
***