..
kruti by pradyumna teertha ಪ್ರದ್ಯುಮ್ನತೀರ್ಥರು
ನಿರುತದಿ ಭಜಿಪೆನಾ ಭರತನ ರಾಣಿಯೇ ಭಾರತಿಯೇ ಪ
ಗುರುವರಂತರ್ಗತ ಹರಿಭಕ್ತಿ ಪಾಲಿಸೇ ಭಾರತಿಯೇ ಅ.ಪ
ಕಾವೋದು ಬಾಲನ ಸೇವೆ ನೀಕರಿಸದೆ ಭಾರತಿಯೇ
ಶಿವಮುಖ ಸುರ ಸಂಸ್ತವಕೆ ಸುಪ್ರೀತಳೆ ಭಾರತಿಯೇ 1
ಕಾಳೀದ್ರೌಪದಿ ಶಿವಕನ್ಯಳೆಂದೆನಿಸಿ ಭಾರತಿಯೇ
ನಳನಂದಿನಿ ಮನ ಕೊಳೆಯ ತೊಳೆಯಬೇಕೇ ಭಾರತಿಯೇ 2
ವಂದಿಪೆ ನಿನಗಿಂದ್ರೇಶನಳೆಂದೆನಿಸಿದಿ ಭಾರತಿಯೇ
ಕಂದನ ಕುಂದುಗಳೊಂದೆಣಿಸದೆ ಕಾಯೇ ಭಾರತಿಯೇ 3
ಕಾಲಾಭಿಮಾನಿಯೆ ಶೈಲಜೆ ಶ್ಯಾಮಲ ಭಾರತಿಯೇ
ಪೋಲೋಮಿ ಉಷರಿಂದ ವಾಲಗ ಕೈಕೊಂಬೆ ಭಾರತಿಯೇ 4
ಹರಿಯ ಹಿರಿಯ ಸೊಸಿ ಪರಮ ಪದಕೆ ಬರುವಿ ಭಾರತಿಯೇ
ಕರುಣಾದಿ ಭಾರತಾದ್ಯರ್ಥವರುಹೆ ನಿತ್ಯಾ ಭಾರತಿಯೇ 5
ಸನಕಾದಿ ಯೋಗಿ ವಿನುತ ಚರಣಳೆ ಎನ್ನ ಭಾರತಿಯೇ
ಹೀನ ಬುದ್ಧಿಯ ಕಳಿ ಜ್ಞಾನಮಾರ್ಗವ ತೋರೆ ಭಾರತಿಯೇ6
ಮಾನಾಭಿಮಾನ ನಿನ್ನಾಧೀನ ಎನಗೆ ನೀ ಭಾರತಿಯೇ
ಶ್ರೀ ನರಹರಿ ಪಾದ ಮನದಿ ತೋರಿಸೇ ನಿತ್ಯಾ ಭಾರತಿಯೇ 7
***