by ಪ್ರಸನ್ನವೆಂಕಟದಾಸರು
ನೀ ಎನ್ನ ಸಲಹೋದಾತ ಶ್ರೀನಾಥ ಪ.
ಅಣುರೇಣು ತೃಣ ವ್ಯಾಪ್ತ ಅಕಳಂಕ ನಿರ್ಲಿಪ್ತವನರುಹಾಸನ ಪ್ರೀತ ವೈಕುಂಠಕರ್ತ1
ತಾಪಸಜನ ಪೂಜ್ಯ ತರಣಿಕೋಟಿತೇಜಶ್ರೀಪರಮೋತ್ತಮ ಸಕಲಾಂತರಾತ್ಮ 2
ಬ್ರಹ್ಮಾಂಡಸಂರಕ್ಷ ಭಾಗವತರ ಪಕ್ಷಹಮ್ಮಿನ ಖಳರೊದ್ದಹರಿಅನಿರುದ್ಧ3
ಸ್ವರ್ಣಮುಖರೀ ತೀರ ಸನ್ನಿಧಿ ಮಂದಿರಪೂರ್ಣಮಹಿಮ ವಟಪರ್ಣಾಶ್ರಯ ಕೃಷ್ಣ 4
ಸ್ವಾಮಿ ಪುಷ್ಕರವಾಸಶುಭಮಂದಸ್ಮಿತಹಾಸಪ್ರೇಮಾಬ್ಧಿಅಹರ್ನಿಶಿಪ್ರಸನ್ವೆಂಕಟೇಶ5
****