Showing posts with label ಯಾರಿಗೆ ದೂರುವೆನೋ ಗಿರಿರಾಯ ಯಾರೆನ್ನ ಸಲಹುವರೋ purandara vittala YAARIGE DOORUVENO GIRIRAAYA YAARENNA SALAHUVARO. Show all posts
Showing posts with label ಯಾರಿಗೆ ದೂರುವೆನೋ ಗಿರಿರಾಯ ಯಾರೆನ್ನ ಸಲಹುವರೋ purandara vittala YAARIGE DOORUVENO GIRIRAAYA YAARENNA SALAHUVARO. Show all posts

Wednesday, 3 November 2021

ಯಾರಿಗೆ ದೂರುವೆನೋ ಗಿರಿರಾಯ ಯಾರೆನ್ನ ಸಲಹುವರೋ purandara vittala YAARIGE DOORUVENO GIRIRAAYA YAARENNA SALAHUVARO




ಯಾರಿಗೆ ದೂರುವೆನೋ ಗಿರಿರಾಯ
ಯಾರೆನ್ನ ಸಲಹುವರೋ ||ಪ ||

ಸಾರಿದ್ದ ಭಕ್ತಸಂಸಾರಿ ನಿನ್ನಯ ಪದ-
ವಾರಿಜವನು ತೋರೊ ಕಾರುಣ್ಯನಿಧಿ ಬೇಗ ||ಅ ||

ಕಷ್ಟ ಜನ್ಮದಿ ಬಂದೆನೋ, ಧಾರುಣಿಯೊಳು
ದುಷ್ಟರಿಂದಲಿ ನೊಂದೆನೋ
ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆ
ಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯ ಬೇಡ ||

ಹಿಂದೆ ಮಾಡಿದ ಕರ್ಮವು, ಈ ಭವದೊಳು
ಮುಂದಾಗಿ ತೋರುತಿದೆ
ಇಂದಿಲ್ಲ ಗತಿಯದರಿಂದ ನೊಂದೆನು ನಾನು
ಮಂದರಧರ ಗೋವಿಂದ ನೀನಲ್ಲದೆ ||

ಹಗಲು ಕತ್ತಲೆ ಸುತ್ತಿಯೆ, ಗಂಗೆಡಿಸುತ್ತ
ಹಗೆಯಾಗಿ ನಗಿಸುತಿದೆ
ಉಗುರಿನ ಸಿಗಿಗೆ ಮುಳ್ಳುಗಳೀಗ ನೆಟ್ಟುವು
ಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ ||

ಬಾಡಿದ ಅರಳಿಯನು, ಕಲ್ಲಿನ ಮೇಲೆ
ಈಡಾಗಿ ನಾಟಿದರೆ
ಬೇಡಿಕೊಂಡರೆ ತಳಿರು ಮೂಡಿ ಬರುವುದುಂಟೆ
ರೂಢಿಗೊಡೆಯ ನೀನು ನೋಡದಿದ್ದ ಮೇಲೆ ||

ಹಲವು ಪರಿಯ ಕಷ್ಟವ, ನಿನ್ನಯ ಪಾದ-
ಜಲಜದ ಕರುಣದಲಿ
ಸುಲಿಗೆ ಕೊಟ್ಟೆನು ನಾನು ಸೂರೆಗಾರರಿಗೆಲ್ಲ
ಒಲವಾಗು ಎನ್ನೊಳು ಪುರಂದರವಿಠಲ ||
***

pallavi

yArige dUruvenO girirAya yArenna salahuvarO

anupallavi

sAridda bhakta samsAri ninnaya pada vArijavanu tOro kAruNyanidhi bEga

caraNam 1

kaSTa janmadi bandenO dhAraNiyoLu duSTarindali nondenO
niSTUra beDavo ninna nambida mEle srSTikoDeya enna biTTu kaLeya bEDa

caraNam 2

hinde mADida karmavu I bhavadoLu mundAgi tOrutide
indilla gatiyadarinda nondenu nAnu mandaradhara gOvinda nInallade

caraNam 3

hagalu kattale suttiye gangeDisutta hageyAgi nagisutide
ugurina sigige muLLugaLIga neTTuvu sogava hArisi ede digilu goLisutide

caraNam 4

bADida araLiyanu kallina mEle IDAgi nADidare bEDi koNDare
taLiru mUDi baruvuduNTe rUDhikoDeya nInu nODadidda mEle

caraNam 5

halavu pariya kaSTava ninnaya pAda jalajada karuNadali sulige
koTTenu nAnu suregArarigella olavAgu ennoLu purandara viTTala
***

ರಾಗ ಮುಖಾರಿ ಅಟ ತಾಳ (raga, taala may differ in audio)

ಯಾರಲಿ ದೂರುವೆನೋ ಗಿರಿಯ ರಾಯಾ ಯಾರೆನ್ನ ಸಲಹುವರೋ ಪ

ಸಾರಿದ ಭಕ್ತ ಸಂಸಾರಿ ನಿನ್ನಯ ಪದವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪ

ಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳುದುಷ್ಟರಿಂದಲಿ ನೊಂದೆನೋ ||ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1

ಹಿಂದೆ ಮಾಡಿದ ಕರ್ಮವು ಈ ಭವದೊಳುಮುಂದಾಗಿ ತೋರುತಿದೆ ||ಇಂದೇನುಗತಿಅದರಿಂದ ನೊಂದೆನು ನಾನುಮಂದರಧರಗೋವಿಂದ ನೀನಲ್ಲದೆ2

ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತಹಗೆಗಳ ನಗಿಸುತಿದೆ ||ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3

ಬಾಡಿದರಳಿಸಸಿಯ ಕಲ್ಲಿನ ಮೇಲೆಈಡಾಗಿ ನಾಟಿದರೆ ||ಬೇಡಿಕೊಂಡರೆತಳಿರುಮೂಡಿ ಬರುವುದುಂಟೆರೂಢಿಗೊಡೆಯ ನೀನು ನೋಡದಿದ್ದ ಮೇಲೆ 4

ಹಲವು ಪರಿಯ ಕಷ್ಟವ ನಿನ್ನಯಪಾದಜಲಜದ ಕರುಣದಲಿ ||ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲಒಲವಾಗು ಎನ್ನೊಳು ಪುರಂದರವಿಠಲ 5
***********