..
kruti by ಲಕ್ಷ್ಮೀನಾರಯಣರಾಯರು Lakshminarayanaru
ಓ ದೇವ ನೀನೆಂಥ ಕರುಣಾಳೊ
ಮಾದೇವ ನೀನೆಂಥ ಕರುಣಾಳೊ ಪ
ಕಾಲನ ಕಾಲಲೊದ್ದು ಬಾಲನಿಗಾಯುಷ್ಯ
ಪಾಲಿಸಿದೆ ನೀನೆಂಥ ಕರುಣಾಳೊ 1
ಸುರೇಂದ್ರ ಪ್ರಮುಖರ ಪೊರೆಯಲು ಗರಳವ
ಕೊರಳೊಳು ಧರಿಸಿದೆ ಕರುಣಾಳು 2
ಘೋರ ಭವಾಂಬುಧಿ ತಾರಣೋಪಾಯವ
ಬೀರಿದೆ ಜಗಕೆಲ್ಲ ಕರುಣಾಳು 3
ಕ್ಷೀರವ ಬೇಡಲು ಕ್ಷೀರೋದಧಿಯನಿತ್ತೆ
ಪೋರನಿಗೆ ಇನ್ನೆಂಥ ಕರುಣಾಳು 4
ಶ್ರೀಕಾಂತ ಹಿತ ಸಖ ಶ್ರೀಕಂಠ ನಿನ್ನಂಥ
ನಾ ಕಾಣೆ ಧರೆಯೊಳು ಕರುಣಿಗಳ 5
***