ಈಗಲುಪ್ಪವಡಿಸಿದಳು ಇಂದಿರಾದೇವಿ
ಯೋಗರತಿ ನಿದ್ರೆ ತಿಳಿದು ||ಪಲ್ಲವಿ||
ಕಡೆಕಣ್ಣ ಅಂಗೈಯಿಂದಲೊರಸುತ ಸಡಿಲಿದ ತುರುಬ ಬಿಗಿದು ಕಟ್ಟುತ
ನಡುವಿನೊಡ್ಯಾಣವ ನಟನೆಯಿಂ ತಿರುವುತ ಕಡಗ ಕಂಕಣ ಬಳೆ ಕರದಿ ಘಲ್ಲೆನುತ ||1||
ಕೂರುಗುರು ಗಾಯವನು ಕೊನೆ ಬೆರಳಲೊತ್ತುತ ಹಾರದ ತೊಡಕನು ಬಿಚ್ಚಿಹಾಕುತ
ಜಾರಿದ ಜಾಜಿದಂಡೆ ಸರವನೀಡಾಡುತ ಮೋರೆಯ ಕಿರುಬೆವರ ಮುಂಜೆರಗಿಲೊರಸುತ ||2||
ಕಕ್ಕಸ ಕುಚದೊಳಿರ್ದ ಕಸ್ತೂರಿಯನೊರಸುತ ಚಕ್ಕನೆ ಕನ್ನಡಿಯೊಳು ಮುಖ ನೋಡುತ
ಅಕ್ಕರದ ತಾಂಬೂಲ ಸರಸದಿಂದುಗುಳುತ ಚೊಕ್ಕ ಪುರಂದರ ವಿಠಲನ ನೋಡಿ ನಗುತ ||3||
********
ಪುರಂದರದಾಸರು
ಈಗಲುಪ್ಪವಡಿಸಿದಳು ಇಂದಿರಾದೇವಿಯೋಗರತಿ ನಿದ್ರೆ ತಿಳಿದು ಪ
ಕಡೆಗಣ್ಣಕಪ್ಪಅಂಗೈಯಿಂದಲೊರಸುತಸಡಲಿದ ತುರುಬ ಬಿಗಿದು ಕಟ್ಟುತ ||ನಡುವಿನೊಡ್ಯಾಣವ ನಟನೆಯಿಂ ತಿರುವುತಕಡುಕ ಕಂಕಣ ಬಳೆ ಕರದಿ ಘಲ್ಲೆನುತ 1
ಕೂರುಗುರ ಗಾಯವನು ಕೊನೆ ಬೆರಳಲೊತ್ತುತಹಾರದ ತೊಡಕನು ಬಿಚ್ಚಿ ಹಾಕುತ ||ಜಾರಿದ ಜಾಜಿದಂಡೆ ಸರವನೀಡಾಡುತಮೋರೆಯ ಕಿರುಬೆವರ ಮುಂಜೆರಗಿಲೊರಸುತ 2
ರಕ್ಕಸ ಕುಚದೊಳಿರ್ದ ಕಸ್ತುರಿಯನೊರಸುತಚಕ್ಕನೆ ಕನ್ನಡಿಯೊಳು ಮುಖ ನೋಡುತ ||ಅಕ್ಕರದ ತಾಂಬೂಲ ಸರಸದಿಂದುಗುಳುತಚೊಕ್ಕಪುರಂದರವಿಠಲ ನೋಡಿ ನಗುತ3
***

pallavi
IgluppavaDisidLu indirAdEvi
caraNam 1
kaDekaNNa angaiyindalorasuta saDilida turuba bigidu kaTTuda
naDuvinoDyANava naTaneyim tiruvuta kaDada kankaNa baLe karadi ghallenuta
caraNam 2
kUrugurugAyavanu kone beraLalottuta hArada toDaganu biccihAkuta
jArida jAjidaNDe saravanIDADuta moreya kirupevara munjeragilorasuta
caraNam 3
rakkasa kucadoLirda kastUriyanorasuta cakkane kannaDiyoLu mukha nODuta
akkarada tAmbUla sarasadinduguLuta cokka purandara viTTalana nODi naguta
***