Showing posts with label ರಾಘವೇಂದ್ರ ಗುರುವೆ ನಿಮ್ಮಯ ಅನುರಾಗವ ನಾ ಬೇಡುವೆ ramakanta vittala. Show all posts
Showing posts with label ರಾಘವೇಂದ್ರ ಗುರುವೆ ನಿಮ್ಮಯ ಅನುರಾಗವ ನಾ ಬೇಡುವೆ ramakanta vittala. Show all posts

Monday, 6 September 2021

ರಾಘವೇಂದ್ರ ಗುರುವೆ ನಿಮ್ಮಯ ಅನುರಾಗವ ನಾ ಬೇಡುವೆ ankita ramakanta vittala

 ankita ರಮಾಕಾಂತವಿಠಲ  

ರಾಗ: ಕಲ್ಯಾಣಿ ತಾಳ: ಮಿಶ್ರಛಾಪು


ರಾಘವೇಂದ್ರ ಗುರುವೆ ನಿಮ್ಮಯ ಅನು-

ರಾಗವ ನಾ ಬೇಡುವೆ


ಬಾಗಿ ನಮಿಪೆ ದಯಾಸಾಗರ ಯತಿವರ

ಜಾಗು ಮಾಡದೆ ಎನ್ನ ಬೇಗ ಸಲಹಿರಿ ಎಂದು ಅ.ಪ


ನಿಮ್ಮ ಆಶ್ರಯ ಜನಕೆ ಸಕಲ ವಿಧ

ನೆಮ್ಮದಿಯನೆ ಈವುದು

ಅಮ್ಮೈಸಿದವರ ದುಷ್ಕರ್ಮರಾಶಿಗಳನ್ನು

ಹಿಮ್ಮೆಟ್ಟಿಸುವ ವರ ಸುಮ್ಮನಸಾಗ್ರಣಿ 1

ಶ್ರೀ ರಾಘವೇಂದ್ರ ನಮೋ ಎಂಬುವ ಒಂದೇ

ದಾರಿ ನಂಬುತ ಬಂದಿಹೆ

ಸಾರ ಸದ್ಭಕ್ತಿ ಶರೀರ ದಂಡನೆಯಲ್ಲಿ

ಧೀರನಲ್ಲದ ಎನ್ನ ಗಾರು ಮಾಡಲು ಸಲ್ಲ 2

ಮೊದಲೆರಡವತಾರದಿ ರಾಜರು ಎನಿಸಿ

ಮುದದಿ ಮೂರನೆಯ ರೂಪದಿ

ಸದಮಲ ಯತಿಸಾರ್ವಭೌಮ ಪಟ್ಟವನಾಳ್ದು

ನಿಧಿಯಾಗಿ ನಿಂತಿರಿ ಬದಿಗ ಭಕ್ತರಿಗೆಲ್ಲ 3

ಶಾಪಾನುಗ್ರಹಶಕ್ತರೆ ಬಲ್ಲೆನೆ ನಿಮ್ಮ

ಅಪಾರ ಮಹಿಮೆಯನು

ಸಾಪೇಕ್ಷೆಯಲಿ ನಿಮ್ಮ ಶ್ರೀಪಾದವನು ಸೇರ್ದೆ

ಆಪತ್ತುಗಳ ಹರಿಸಿ ಕಾಪಾಡಿರಿ ಎಂದು 4

ಮಂತ್ರಾಲಯ ಪ್ರಭುವೆ ವಾಂಛಿತಪ್ರದ

ಚಿಂತಾ ರತುನ ಸಮರೆ

ಎಂತುಂಟೊ ನಿಮ್ಮೊಳು ಸಂತಸದಲಿ ರಮಾ-

ಕಾಂತವಿಠಲ ನಿಂತು ಪಂಥ ಪೂರೈಸುವ 5

***