Showing posts with label ಜ್ಞಾನದಾಯಕ ಜಗಕೆ ನೀನೆ ಶೌರಿ jayesha vittala. Show all posts
Showing posts with label ಜ್ಞಾನದಾಯಕ ಜಗಕೆ ನೀನೆ ಶೌರಿ jayesha vittala. Show all posts

Thursday, 5 August 2021

ಜ್ಞಾನದಾಯಕ ಜಗಕೆ ನೀನೆ ಶೌರಿ ankita jayesha vittala

..


ಜ್ಞಾನದಾಯಕ ಜಗಕೆ ನೀನೆ ಶೌರಿ ಪ


ಪ್ರಾಣಪಂಚಶರೀರ ಜೀವ ಜಡ ನಿನ್ನೊಶವೊ ಅ.ಪ


ನೀನೆಂತು ನಮ್ಮಲ್ಲಿ ನಿಂತು ಕುಣಿಸಿದರಂತು

ಜ್ಞಾನೇಚ್ಛೆ ಯತ್ನಮನ ಕರಣದೇಹಾ

ನಾನಾಪರಿ ಅಂತೆಂತು ಕುಣಿ ಕುಣಿದÀು ಕುಣಿಬೇಕು

ಆನೊಲ್ಲೆನೆಂಬ ಶಕ್ತನ್ನ ನಾ ಕಾಣೆ 1


ತನುಛಾಯದಂದಲಿ ನಮ್ಮಿರವು ನೀ ಬಲ್ಲಿ

ತನುಮನದ ಯತ್ನಗಳು ನಡಿವುದೇನೊ

ಅನಿಮಿತ್ತ ಸಖ ನೀನು ಅನುಗಾಲ ನಮಗೆಂದು

ಅನವರತ ಶ್ರುತಿರಾಸಿ ಘೋಷಿಪದು ನಂಬಿಹೆನು 2


ಕಾಲಕರ್ಮಾಲಯನೆ ಮೂಲ ನೀ ಸರ್ವಕ್ಕೆ

ಫಲಾಕ್ಷಸಖ ನೀನು ವಿಮುಖನಾಗೆ

ಕೀಳು ಚೇತನ ಜಾಲ ಅಚೇತನ ಸಮರಹುದೊ

ಲೋಲ ಜಯೇಶವಿಠಲ ಸುಮ್ಮನೆ ಕೃಪೆಮಾಡೊ 3

***