ರಾಗ ಪಂತುವರಾಳಿ ಆದಿತಾಳ
Audio by Mrs. Nandini Sripad
ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ
ವಾಣಿಯರಸನಯ್ಯನು ||ಪ||
ವೇಣುಗಾನಲೋಲ ಮೋಸಮಾಡಲು ಬಂದ
ದೀನರಕ್ಷಕನಯ್ಯ ಮೋಹನಕೃಷ್ಣ || ಅ ಪ ||
ಪತಿತಪಾವನ ಬಂದ ಸಚ್ಚಿದಾನಂದನು
ಹಿತಕರನು ಬಂದ ನಿಖಿಳವೇದ
ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ
ಮತಿಗೆಡಿಸಿ ಪೋದನಯ್ಯ ಮುದ್ದುರಂಗಯ್ಯ ಕೃಷ್ಣ || 1 ||
ಉಡುಪಿನಿಲಯ ಬಂದ ಉಡುಪನಂತ್ಹೊಳೆಯುತ
ತಟಿಯಂತೆ ಮರೆಯಾದ ಕಾಣಬಾರದ ವಸ್ತು
ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು
ಅಷ್ಟು ಮಾಯವಯ್ಯ ಬಲು ಮಾಯವಯ್ಯ || 2 ||
ಏಸು ಹರುಷವೊ ಏಸು ಕರುಣವೊ
ಕಾಸು ಬಾಳದ ಎನಮ್ಯಾಲೆ ಮುದ್ದು ಕೃಷ್ಣಯ್ಯಗೆ
ವಾಸುಕಿಶಯನನು ತಂದೆ ಪುರಂದರವಿಠಲ
ಶೇಷಾದ್ರಿವಾಸನಯ್ಯ ಕೇಳಣ್ಣಯ್ಯ || 3 ||
***
pallavi
shrInivAsanu banda kOnEri timmappa vANIyarasanayyanu
anupallavi
vENugAna lOla mOsa mADalu banda dIna rakSakanayya mOhana krSNa
caraNam 1
patita vAhana banda saccidAnandanu hitakaranu banda nigiLa vEda
pratipAdyanu banda higgudali ninda matigeDisi pOdanayya muddu rangayya krSNa
caraNam 2
uDupi nilaya banda uDupanant-hoLeyuta taTiyante mareyAda kANa bArada vastu
uTTaddu toTTaddu iTTaddu nODalu aSTu mAyavayya balu mAyavayya
caraNam 3
Esu haruSavo Esu karuNavo kAsu bALada enamayAla muddu krSNayyage
vAsuki shayananu tande purandara viTTala shESAdri vAsanayya kELaNNayya
***
ಶ್ರೀ ಪುರಂದರದಾಸರ ಕೃತಿ
ರಾಗ ಪಂತುವರಾಳಿ ಆದಿತಾಳ
ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ ।
ವಾಣಿಯರಸನಯ್ಯನು ॥ ಪ ॥
ವೇಣುಗಾನಲೋಲ ಮೋಸಮಾಡಲು ಬಂದ ।
ದೀನರಕ್ಷಕನಯ್ಯ ಮೋಹನಕೃಷ್ಣ ॥ ಅ ಪ ॥
ಪತಿತಪಾವನ ಬಂದ ಸಚ್ಚಿದಾನಂದನು ।
ಹಿತಕರನು ಬಂದ ನಿಖಿಳವೇದ ॥
ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ ।
ಮತಿಗೆಡಿಸಿ ಪೋದನಯ್ಯ ಮುದ್ದುರಂಗಯ್ಯ ಕೃಷ್ಣ ॥ 1 ॥
ಉಡುಪಿನಿಲಯ ಬಂದ ಉಡುಪನಂತ್ಹೊಳೆಯುತ ।
ತಟಿಯಂತೆ ಮರೆಯಾದ ಕಾಣಬಾರದ ವಸ್ತು ॥
ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು ।
ಅಷ್ಟು ಮಾಯವಯ್ಯ ಬಲು ಮಾಯವಯ್ಯ ॥ 2 ॥
ಏಸು ಹರುಷವೊ ಏಸು ಕರುಣವೊ ।
ಕಾಸು ಬಾಳದ ಎನಮ್ಯಾಲೆ ಮುದ್ದು ಕೃಷ್ಣಯ್ಯಗೆ ॥
ವಾಸುಕಿಶಯನನು ತಂದೆ ಪುರಂದರವಿಠಲ ।
ಶೇಷಾದ್ರಿವಾಸನಯ್ಯ ಕೇಳಣ್ಣಯ್ಯ ॥ 3 ॥
************