Showing posts with label ಕರಿಯನೆರಿರೇ ಮುರಾರಿಗೆ ಕರಿಯನೆರಿರೆ ಭರಣ indiresha. Show all posts
Showing posts with label ಕರಿಯನೆರಿರೇ ಮುರಾರಿಗೆ ಕರಿಯನೆರಿರೆ ಭರಣ indiresha. Show all posts

Friday, 27 December 2019

ಕರಿಯನೆರಿರೇ ಮುರಾರಿಗೆ ಕರಿಯನೆರಿರೆ ಭರಣ ankita indiresha

ಕರಿಯನೆರಿರೇ ಮುರಾರಿಗೆ ಪ

ಕರಿಯನೆರಿರೆ ಭರಣ ವಸನಗಳಧರಿಸಿ ದೇಹದಿ ಸುರತರುಣಿ ಪೋಲುವರೆ ಅ.ಪ.

ಹಂಸವಾಹನ ಶಿವರಂಶಗಳನು ಕೂಡಿಕಂಸ ಶಾಸ್ತ್ರವ ತ್ರಿವಂಶ ಬೆಳೆಸಿದಾ 1

ಹತ್ತು ರಾತ್ರಿಯಲಿ ಬಂದ ಮತ್ತ ಕಾಮಿನಿಗೊಮ್ಮೆಭೂತ್ಯ ಭೂತಿದ ಗೋಪಿ ಪುತ್ರನ ಪಾಡಿ2

ಕರಿಪುದಸರಾಧ್ವರ ಧನುರ್ದನು ತನ್ನಕರದಿ ಮುಟ್ಟುತ ಮೃತ ತರುಳನ ಕಾದಾ 3

ರಾಮನಾಮದಿ ಭೂಪ ಧಾಮದೊಳಗೆ ಪುಟ್ಟಿಕಾಮಿನಿ ಸಹ ಕೂತ ಪ್ರೇಮ ಪುರುಷಗೆ 4

ಕರಿ ಕರ ಕರದೊಳು ಸುರಭಿ ಕುಸುಮವೆತ್ತಿಪರಮ ಪುರುಷ ವಿಪತ್ ಪರಿಹರಿಸಿದನು 5

ಕತ್ತಿ ಪಿಡಿದು ಕರ ಕತ್ತರಿಸುವೆನೆಂಬೋ-ನ್ಮತ್ತನಾಸ್ತ್ರವ ಕರೆ ಕಿತ್ತು ರಕ್ಷಿಸಿದಾ 6

ಪೇಸಿಯಿಂದಲಿ ಪುಂಸ್ತ್ರೀ ಕೂಸುಗಳನೆ ಮಾಡಿತೋಷಿಸಿದನು ಬದರೀಶ ಮೌನಿಜನು 7

ಇಂಥ ಮಹಿಮೆಗಳಾನಂತ ಮಾಡಿದ ಲಕ್ಷ್ಮೀ-ಕಾಂತಗಬ್ದಾಪತ್ತಿ ಶಾಂತಿ ಮಾಡುವುದೇ 8

ಸುಂದರ ಭೂಷಣಗಳಿಂದ ಶೋಭಿಪ ಬಾಲಇಂದಿರೇಶನ ಕೃಪಾ ಪೊಂದಿ ಸುಖಿಸುತಿರೆಕುಂದಣದಾರತಿ ನಿಂದು ಬೆಳಗಿರೆ 9
**********