Showing posts with label ಹೆಣಗಿದರಾಗದು ಒಣತರ್ಕದಲಿದಣಿದರೆ prasannavenkata. Show all posts
Showing posts with label ಹೆಣಗಿದರಾಗದು ಒಣತರ್ಕದಲಿದಣಿದರೆ prasannavenkata. Show all posts

Tuesday 19 November 2019

ಹೆಣಗಿದರಾಗದು ಒಣತರ್ಕದಲಿದಣಿದರೆ ankita prasannavenkata

by ಪ್ರಸನ್ನವೆಂಕಟದಾಸರು
ಹೆಣಗಿದರಾಗದು ಒಣತರ್ಕದಲಿದಣಿದರೆ ಕೂಡದು ಭಕುತಿವನಜಾಕ್ಷನ ಕೃಪೆ ಮನಸ್ಸಾಕ್ಷ್ಯಾದರೆತನ ತಾನಾಹದು ಮುಕುತಿ ಪ.

ಸೂಕ್ಷ್ಷ್ಮತತ್ವದಿ ದಕ್ಷನೆನಿಸದೆದೀಕ್ಷಿತ ನಾಮಿದ್ದೇನುಅಕ್ಷರಬಲದಲಿ ಲಕ್ಷವು ವೃಥಾಗುರುಶಿಕ್ಷಿಲ್ಲದ ಜನುಮೇನುಭಿಕ್ಷುಕ ಧಾನ್ಯದ ಲಕ್ಷ್ಷ್ಯದಲಿ ಪದ್ಮಾಕ್ಷನ ಪೊಗಳಿದರೇನುಕುಕ್ಷಿಯ ಲಾಭವುಅಕ್ಷಯತೋಷದಮೋಕ್ಷೋಪಾಯವದೇನು 1

ದ್ರವ್ಯಾದಿವ್ರಯ ಹವ್ಯಾದಿಕ್ರಯಅವ್ಯಯಜೀವ ಸ್ವಭಾವಾಖ್ಯಕಾವ್ಯರಚನೆ ಶಬ್ದ ವ್ಯಾಕರಣದಹವ್ಯಾಸವು ಇಹ ಸೌಖ್ಯಅವ್ಯಾಕೃತ ನಾಮಾವ್ಯವಹಾರಿಲ್ಲದನವ್ಯ ಕಥಾಜನಸಖ್ಯದಿವ್ಯಮೂರುತಿ ವೇದವ್ಯಾಸಜಭವಸೇವ್ಯನ ನಿಷ್ಠೆಯೆ ಮುಖ್ಯ 2

ಕಡು ಆದರದೊಳು ಕಡಲಳಿಯನ ಪದವಿಡಿಯದವನ ಶ್ರುತಿಶಾಸ್ತ್ರನಡುಹೊಳೆ ದಾಟುತ ತಡಿಯಲಿ ನಾವೆಯುಬುಡಮೇಲಾಯಿತು ವ್ಯರ್ಥದೃಢ ಪ್ರಸನ್ವೆಂಕಟ ಒಡೆಯನಾಚ್ಛಿನ್ನ ದಯಪಡೆದನುಗುರುಸುಖತೀರ್ಥನುಡಿಗಳ ಮಾಲೆಯ ತುಡುಗರ ತಮಸಕೆಬಡಿದಟ್ಟುವನು ಸಮರ್ಥ 3
******