Showing posts with label ಬಯಲ ಭಾವಿಯ ನೀರಿಗೆ ಬಂದಳೊಬ್ಬಳು purandara vittala. Show all posts
Showing posts with label ಬಯಲ ಭಾವಿಯ ನೀರಿಗೆ ಬಂದಳೊಬ್ಬಳು purandara vittala. Show all posts

Friday, 6 December 2019

ಬಯಲ ಭಾವಿಯ ನೀರಿಗೆ ಬಂದಳೊಬ್ಬಳು purandara vittala

ಪುರಂದರದಾಸರು
ಬಯಲ ಭಾವಿಯ ನೀರಿಗೆ ಬಂದಳೊಬ್ಬಳು ಬಾಲೆ |ಬಾಯಾರಿ ಬಿದ್ದಳು ಕೊಡವೊಡೆಯಿತು ನೀರುರುಳಿತು ಪ.

ನೀರಿಲ್ಲದೆ ನೆರಳಿಲ್ಲದೆ ಬೇರಿಲ್ಲದೆ ಸಸಿಹುಟ್ಟಿಹೂವಿಲ್ಲದೆ ಕಾಯಿಲ್ಲದೆ ಅದು ಫಲಕೆ ಬಂದು ||ಕರವಿಲ್ಲದೆ ಕಾಲಿಲ್ಲದೆ ಕೊಯ್ವರಯ್ವರು ಆ ಹಣ್ಣನು |ಮರುಳಾಯಿತು ಮೂವತ್ತು ಸಾವಿರ ಮಂದಿ 1

ಕುರುಡ ಕಂಡನು ಸರ್ಪನಡುವಿರುಳು ಬಾಹುದನು |ಮೂಕ ಕಂಡನು ಕನಸ ಕಿವುಡನು ಕೇಳಿದ ||ಇರವು ಹಾರಿತು ಗಗನಕೆ ಮರವು ಮುರಿಯಿತು ನೋಡಿ |ವಿಧಿತನ್ನ ಬೇಟಿಗೆ ಹೋಗುವ ಸಡಗರ ನೋಡಿ2

ಕಿಚ್ಚಿನ ಕೊಡದವಳೆ ನೀ ಬಂದೆ ತೋರಣಗಟ್ಟಿ |ರಚ್ಚಿಗೆ ಬಾಹೋರು ನಾಲುವರೊಳಗೆಉಚ್ಚರಿಸಲೂ ಸಲ್ಲ ಕೇಳು ಪುರುಷನ ಸೊಲ್ಲಅಚ್ಚಪುರಂದರವಿಠಲ ತಾನೆ ಬಲ್ಲ 3
*********