Wednesday, 1 September 2021

ಅಯ್ಯಾ ಜಗದಯ್ಯಾ ಜೀಯಾನಂದ ನಿಮ್ಮ ಮಹಿಮೆಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಅಯ್ಯಾಜಗದಯ್ಯಾ ಪ 

ಅಯ್ಯಾ ಜಗದಯ್ಯಾ ಜೀಯಾನಂದ ನಿಮ್ಮ ಮಹಿಮೆಯ ಅಜ ಭವಾದಿಗಳಿಗೆ ತಾಯಿಯ ಮರೆವ ಶಿಶುವಿನ ಪರಿದಣಿದೆನಾ ಪ್ರೀಯದಲಿ ಸಲಹವು ಅವಗುಣ ನೋಡದೇ 1 

ಧರೆಯೊಳಗ ಸಕಲಪತಿತರನ್ನು ಉದ್ಧರಿಸಲ್ಕೆ ಪರಬೊಮ್ಮತಾನೊಂದು ರೂಪನಾಗಿ ಕರುಣದಿಂದಲಿ ಅವತರಿಸಿದನೆಂದೆನ್ನದೆ ನರನೆಂದು ಬಗೆವವನು ಗುರುತಲ್ಪಕಾ2 

ಸಾಕಾರ ನಿಮೈಲನಾಗಿ ಕ್ರೀಡಿಸಿದರೆಯು ಏಕ ಮೇವಾದ್ವಿತಿಯು ಶೃತಿಯೆನುತಿರೇ ಕಾಕು ಬುದ್ದಿಯಲಿ ಪರತರ ವಸ್ತು ನಿಮಗೆಂದ ಧಿಕ ಉಂಟೆಂಬುವ ಸುರಾಪಾನಿಯು 3 

ಗಗನದಂದಲಿ ಸಕಲಾತೀತನಾಗಿನೀ ಮಿಗಿಲೆನಿಸಿ ಸಂಸಾರ ಸ್ಥಿತಿಯಲಿರಲು ಅಗಣಿತತೆ ಗುಣಬಂದನವ ಕಲ್ಪಿಸುವ ಜಗದೊಳಗ ಬ್ರಹ್ಮತ್ಯಕಾರನವನು 4 

ಎನಗ ತಾರಕ ವಸ್ತು ಇದೆಯೆಂದು ನಿಶ್ಚೈಸಿ ತನು ಮನರ್ಪಿಸಿ ನಿಮ್ಮ ಚರಣಾಬ್ಜಕೆ ಘನನಂಬಿ ಶರಣವನು ಪೊಕ್ಕುನೆಲೆಗೊಂಬುದಕೆ ಅನುಮಾನ ವಿಡಿವವನ ಸ್ವರ್ಣಸ್ತೇಯಾ5

 ಇಂತು ಪರಿಯಾದಾ ನಾಲ್ವರ ಸಂಗಡದಲಿ ಅ ತ್ಯಂತ ಹರುಷದ ತಾವ ಬಾಳುತಿಹನು ಅಂತಿಜನ ಸಮನಾದ ಸರ್ವದ್ರೋಹಿಯವನು ಸಂತತ ಬುಧ ಜನರು ಯನುತಿರುವರು 6 

ಎಂದೆಂದು ಈ ಪಂಚ ಮಹಾಪಾತಕಿಳಗಳ ಮುಖ ತಂದೆ ತೋರಿದಿರೆನ್ನ ನಯನಗಳಿಗೆ ಎಂದು ಬಿಡದೇ ಕಾಯೋ ಮಹಿಪತಿ ಸುತ ಪ್ರಾಣ ಛಂದದಲಿ ಮಂದಮತಿ ತನ ಹರಸಿಯನ್ನಾ 7

***


No comments:

Post a Comment