Monday, 6 September 2021

ಬಿಡುವೆನೇನಯ್ಯಾ ಬಿಡುವೆನೇನಯ್ಯಾ ನಿನ್ನ ಹಡೆದ ತಂದೆಯ ankita bhupati vittala

  ankita ಭೂಪತಿವಿಠಲ   

ರಾಗ: ಪೀಲು  ತಾಳ: ಭಜನೀಠೇಕಾ


ಬಿಡುವೆನೇನಯ್ಯಾ ನಿನ್ನ ಬಿಡುವೆನೇನಯ್ಯಾ

ಬಿಡುವೆನೇನಯ್ಯಾ ನಿನ್ನ ಹಡೆದ ತಂದೆಯ ಕೊಲ್ಲಿಸಿ(?)


ಇಲ್ಲಿ ಸಡಗರದಿಂದ ಯತಿಯು ಆಗಿ

ಅಡಗಿಕೊಂಡು ಕುಳಿತರೆ ಈಗ  1

ಚಕ್ರವರ್ತಿ ಆದರೇನು ಚಕ್ರಪಾಣಿಯ ಕುಣಿಸಿದರೇನು

ನಕ್ರಹರನ ತಂದು ನಮಗೆ ಅಕ್ಕರೆಯಿಂದ ತೋರುವತನಕ  2

ಸಣ್ಣ ಬಾಲಕನಾದರೇನು ಕಣ್ಣು ಮುಚ್ಚಿ ಕುಳಿತರೆ ನೀನು

ಬೆಣ್ಣೆ ಕಳ್ಳ ಕೃಷ್ಣನ ನಮ್ಮ ಕಣ್ಣಿಗೆ ತಂದು ತೋರುವ ತನಕ  3

ಜಾಣಯತಿಯು ಆದರೇನು ಮೌನದಿಂದ ಇದ್ದರೇನು

ಕೋಣನಂತೆ ತಿರುಗುವ ನಮಗೆ ಜ್ಞಾನ ಭಕ್ತಿ ಕೊಡುವ ತನಕ 4

ಶಾಪಾನುಗ್ರಹ ಶಕ್ತನು ನೀನು ಅಪರೋಕ್ಷೀಕೃತ ಶ್ರೀಶನು ನೀನು

ಅಪೇಕ್ಷಿತವ ಕೊಟ್ಟು ನಮಗೆ ಭೂಪತಿವಿಠಲನ ತೋರುವತನಕ  5

***


No comments:

Post a Comment