Monday 6 September 2021

ರಥವಾನೇರಿದ ಶ್ರೀ ಗುರುವರ್ಯ ಕೃತಚರ್ಯಾ ankita gurujagannatha vittala

 ರಾಗ: ಮಧ್ಯಮಾವತಿ ತಾಳ: ಏಕ/ಆದಿ


ರಥವಾನೇರಿದ ಶ್ರೀ ಗುರುವರ್ಯ ಕೃತಚರ್ಯಾ


ಪೃಥ್ವಿ ವಿತಳದಳಪ್ರತಿ ಮಹಿಮವ

ನತಜನರಿಗೆ ತೋರಿ ಮನೋರಥ ಪೂರ್ತಿಪೆನೆಂದು ಅ.ಪ


ದಿನದಿನ ಸೇವಾಸಕ್ತರಾ ಮಾಡುವ ಜನರ

ಮನದ ಚಿಂತೆಯ ಪರಿಹಾರಗೈವುತ ಧೀರ

ಅನಿಮಿಷತರು ತೆರ ಉದಾರ ಸದ್ಗುಣ ಗಂಭೀರ

ತನು ಮನೆ ಧನ ವನಿತೆ ಸುತ ಕೃಷಿ

ಜನರಿಗೆ ಈ ಪರಿ ನೀಡುವೆನೆನುತ 1

ಹಿಂದಿನ ಮಹಿಮೆಗಳದ್ಭುತ ಅದರಿಂದೇನೆನುತ

ವಂದಿಪ ಜನರ ಹೃದ್ಗತ ಪೂರೈಸುವೆನೆನುತ

ಇಂದು ಮಾಡಲು ಜನಕೆಹಿತನಾಗುವ ಹರಿ ಪ್ರೀತ

ನಂದಿತ ಸುಜನರ ಸಂದಣಿಯೊಳು ಮುದ-

ದಿಂದಲಿ ನಲಿಯುತ ಬಂದು ತ್ವರದಲಿ 2

ದಿಟ್ಟ ಶ್ರೀ ಗುರುಜಗನ್ನಾಥವಿಠಲದೂತ

ಶಿಷ್ಟೇಷ್ಟಾಭೀಷ್ಟೆಯದಾತಾ ತ್ರಿಲೋಕದಿ ಖ್ಯಾತ

ನಷ್ಟಾಯು ಮೊದಲಾದಖಿಳಾರ್ಥ ನೀಡುವೊ ಕೃತಾರ್ಥ

ಸೃಷ್ಟಿಯೊಳಗೆ ಬಹು ಶ್ರೇಷ್ಠರಾಗಿ ಕರುಣಾ

ದೃಷ್ಟಿಲಿ ನೋಳ್ಪುದು ಶಿಷ್ಟರ ಮತವೆಂದು 3

***


No comments:

Post a Comment