ankita ಭೂಪತಿವಿಠಲ
ರಾಗ: ಕೇವಾರ ತಾಳ: ತ್ರಿ
ಬಾರಯ್ಯಾ ರಾಘವೇಂದ್ರಾ ಸದ್ಗುಣಸಾಂದ್ರಾ ಪ
ಬಾರಯ್ಯ ಶಂಕುಕರ್ಣ ಬಾರಯ್ಯಾ ಪ್ರಹ್ಲಾದ
ಬಾರಯ್ಯ ಬಾಹ್ಲೀಕ ವ್ಯಾಸ ಮುನೀಂದ್ರಾ 1
ಸತ್ಯಲೋಕದಿ ಸ್ವಲ್ಪ ತಪ್ಪು ಮಾಡಲು ಶಾಪ
ಕೊಟ್ಟ ಬ್ರಹ್ಮನು ದೈತ್ಯ ಕುಲದಿ ಜನಿಸು ಎಂದು 2
ಶಾಪವೇ ವರವಾಯಿತು ಭಕ್ತಿಯ ಬಲದಿ
ಸರ್ವತ್ರ ಶ್ರೀಹರಿಯ ವ್ಯಾಪ್ತಿ ತೋರಿದ ಕಂದಾ 3
ಬಾಹ್ಲೀಕನಾಗಿ ನೀ ರುಕ್ಮಿಣಿ ಅರಸನ
ಪ್ರೀತಿ ಪಾತ್ರನಾದಿ ದ್ವಾಪಾರ ಯುಗದಿ 4
ಶಾಪಶೇಷದಿಂದ ಪಾಪಿಗಳೊಡಗೂಡಿ
ದ್ರೌಪದಿಯ ಪತಿಯ ಗದೆಯಿಂದ ಪ್ರಾಣನೀಗಿದಿ 5
ಪರಮಹಂಸನಾಗಿ ಪುಣ್ಯ ಸಂಚಯ ಮಾಡಿ
ದುರ್ಮತಗಳ ಮುರಿದು ಹರಿಯ ಕುಣಿಸಿದ ಧೀರಾ 6
ಶಾಪ ಮುಕ್ತಿಯ ಕಾಲ ಸಮೀಪಿಸಿತೆಂದು
ಪ್ರಾಪ್ತ ಅನಿಷ್ಠ ಪುಣ್ಯವ ತೂರುತಿರುವಿಯಾ 7
ಭಕ್ತವತ್ಸಲ ಬಾರೋ ಭಯ ನಿವಾರಣ ಬಾರೋ
ಗುರುಸಾರ್ವಭೌಮ ಭೂಪತಿವಿಠಲ ಪ್ರೀಯಾ 8
***
No comments:
Post a Comment