ankita ಭೂಪತಿವಿಠಲ
ರಾಗ: ಪಟದೀಪ ತಾಳ: ತ್ರಿ
ಬರಬೇಕು ಇಂದಿಲ್ಲಿಗೆ ಭಕ್ತರ ಮನೆಗೆ ಪ
ಪರಮಪಾವನ ಗುರು ಸಾರ್ವಭೌಮನೆ ಬೇಗ ಅ.ಪ
ಹಡೆದಪ್ಪ ಖಡುಗವ ಪಿಡಿದು ಬೆದರಿಸಿ ನಿನ್ನ
ಒಡೆಯನೆಲ್ಲಿಹ ನೋಡಿ ಬಿಡುವೆನೆನಲು
ಧೃಡ ಬಕ್ತಿಯಿಂ ಜಗದೊಡೆಯಗೆ ಮೊರೆಯಿಡೆ
ಘುಡು ಘುಡಿಸುತ ಕಂಬ ಒಡೆದು ನರಹರಿ ಬಂದ 1
ಬಾಲಯತಿಯು ಗೋಪಾಲನ ಕುಣಿಸಿ
ಭೂಪಾಲನ ಕುಹಯೊಗ ಕಳೆದು ಪೊರೆದು
ಬಾಲಾಜಿಯನು ಪೂಜಿಸಿ ಬಾಲನಿಗೊಪ್ಪಿಸಿ
ಆ ಮೌಲ್ಯ ಗ್ರಂಥ ಬರೆದ ಮೌನೀಶ ವ್ಯಾಸರಾಯ 2
ರಘುಪತಿ ಪೊಜಕ ರಾಘವೇಂದ್ರನೆ ಬಾರೊ
ಅಘಾದ್ರಿ ಸಂಭೇದನ ದೃಷ್ಟಿ ವಜ್ರಾ
ಬಗೆಬಗೆಯ ಮಹಿಮೆಯ ಜನಕೆ ತೋರಿಸುತ ನೀ
ಅಗಮ್ಯ ಮಹಿಮಾ ಭೂಪತಿವಿಠಲನ ಪ್ರೀಯಾ 3
***
No comments:
Post a Comment