ರಾಗ: [ಶಹನ] ತಾಳ: ಆದಿ
ರಾಘವೇಂದ್ರರಾಯಾ
ಈಗ ಕಾಯೋ ಎನ್ನ ಜೀಯಾ ಪ
ನಿಜಾಕುಮುದ ಚಂದ್ರಾ ಸಾಂದ್ರಾ
ಭಜಾಮಿ ಯತಿ ಇಂದ್ರಾ ತಂದ್ರಾ
ತ್ಯಜಾನೆಗೈಸಿ ಎನ್ನ ನಿಜಾಮನದಿ ಪಾದ
ಭಜಾನೆಗೈವಂತೆ ನಿಜಾಮನವನಿತ್ತು 1
ದುರಾಳ ಸಂಗದಿಂದಾ ನೊಂದಾ
ತರಾಳ ಭವದಿಂದಾ ಬೆಂದಾ
ಮರೂಳು ಭವದೊಳು ಉರೂಳುತೀಪರಿ
ತರಾಳೆ ಸಂಗದಿ ಮನ ಮರೂಳುಗೊಂಡೆನೊ 2
ದಾತಾ ನೀನೆ ಎನ್ನಾ ಇನ್ನಾ
ಮಾತೂ ಲಾಲಿಸೊ ಘನ್ನಾ ಚನ್ನಾ
ತಾತಾ ಗುರುಜಗನ್ನಾಥಾವಿಠಲ ಪಾದ
ಪಾಥೋಜ ಮನ ನಿಕೇತನದಲಿ ತೋರಿ 3
***
No comments:
Post a Comment