Monday, 2 August 2021

ಶರಣು ಶರಣಮ್ಮಾ ಶರಣು ತವ ಜಾನಕಿಯೆ ರುಕ್ಮಿಣಿ ankita indiresha

ಶರಣು ಶರಣಮ್ಮಾ ಶರಣು ತವ ಜಾನಕಿಯೆ ರುಕ್ಮಿಣಿ ಶರಣು ಸತ್ಯಾಭಾಮಿನಿ ಶರಣು ಲಷ್ಮ್ಯಾಂಭೃಣಿಯೇ ಪದ್ಮಿನಿಶರಣು ಶರಧಿ ಸುಖಾತ್ಮಜೆ ಪ


ಶರಣು ತವ ಚರಣಾರವಿಂದಕೆ ಶರಣು ಸುರನುತ ಜಂಘಕೇಶರಣು ಕರಿಕರಭೋರು ಯುಗಳಕೆ ಶರಣು ಸುಟೊಂಕಕೆ1

ಶರಣು ಬಹು ಗಂಭೀರನಾಭಿಗೆ ಶರಣು ಸುಸ್ತನ ಕಂಠೆಗೆಶರಣು ಕರ ಕಣ್ಣು ಮೂಗು ಭ್ರೂಲತೆ ಕರಣಾಭರಣಕೆ 2

ಶರಣು ಸಾಲಕ ಬಿಂಬ ಫಾಲಕೆ ಶರಣು ಕುಸುಮಿತ ವೇಣಿಗೆಶರಣು ಮಾಧವನಂಕ ಬಿಂಬದಿ ಮೆರೆವ ಸುಖ ಮುತ್ತೈದಿಗೆ 3

ನಿತ್ಯಮುಕ್ತಳೆ ದೇಶ ಕಾಲ ಸ್ವಭರ್ತೃಸುಮಜಿತೆ ಭಕ್ತಪೋಷಣೆಕೃತ್ಯ ಕರುಣಾ ಸಾರಸಾಂಡ ಸುಪಾಸ್ತ ಸಂಸಿತಳೆ ನೀ4

ಬಲ್ಲವಳು ಮೊದಲ್ಹಿಡಿದು ನೀನತಿ ಸೊಲ್ಲು ಪೇಳುವೆ ಸ್ನೇಹದಿಂದಲಿಪುಲ್ಲನಾಭನ ಪರಿಚಿಸೀ ಈಗವನಲ್ಲಿ ನೀ ಪೇಳೆ 5

ದೇವಶರ್ಮನು ನಿನ್ನ ಚರಣಾಧ್ಯಾನದಲಿ ಸನ್ನುತಿಸಿ ಕರುಣತೋಯಜಾಕ್ಷನ ಕಂಡು ಸುಖಿಸಿದುಪಾಯವ ಬಲ್ಲವನು 6

ಸುಂದರಾಂಗಿಯೆ ಸಾರಸಾಕ್ಷಿಯೆ ಮಂದಹಾಸಿನಿ ಮಾರಮೋಹಿನಿಇಂದಿರೇಶನ ಮಾನಿನಿಯೆ ತವಕದಿಂದ ನಿಂತಿಹೆನು 7

****


No comments:

Post a Comment