Monday, 6 September 2021

ಈ ಪರಿಯ ಸೊಬಗಾವ ಯತಿಗಾದರುಂಟೆ ankita shreekara vittala

ankita ಶ್ರೀಕರವಿಠಲ  

ರಾಗ: ಕಾಂಬೋಜಿ ತಾಳ: ಝಂಪೆ


ಈ ಪರಿಯಸೊಬಗಾವಯತಿಗಾದರುಂಟೆ

ತಾಪಸೋತ್ತಮ ರಾಘವೇಂದ್ರ ಮುನಿಗಲ್ಲದೆ


ಖುಲ್ಲ ನಿನ್ನಯ ಹರಿಯು ಎಲ್ಲಿಹನು ತೋರೆನಲು

ಬಲ್ಲಿದನು ಸ್ತಂಭದೊಳಗಲ್ಲೆ ತೊರಿದ

ಜಲಜಸಂಭವ ಪ್ರಮುಖರೆಲ್ಲ ತುತಿಸಲು ಸಿರಿಯ-

ನಲ್ಲನೊಲಿಮೆಯ ಪ್ರಹ್ಲಾದಗಲ್ಲದೆ 1

ಭೂಪ ಕುಂತಿಜನಿಂದ ತಾ ಪಡೆದು ಘನವರವ

ಗೋಪಿಕಂದನ ಒಲಿಸಿ ಬಲುತುತಿಸಿದ

ಶ್ರೀಪುರಂದರದಾಸರಾಪೇಕ್ಷ ಸಲ್ಲಿಸಿದ

ತಾಪಸೋತ್ತಮಜನರ ತಾ ಪುನೀತರಗೈದ 2

ತಂದೆ ಶ್ರೀಕರವಿಠಲನಿಂದಾಜ್ಷೆ ಕೈಗೊಳುತ

ಚೆಂದದಿಂದಲಿ ವರಮಂತ್ರಮಂದಿರದಿ ನಿಂದು

ಒಂದಾರುಶತವರುಷ ವಂಧ್ಯಾಂಧಕರಿಗೆಲ್ಲ

ಕಂದರಕ್ಷಿಗಳಿತ್ತು ಕುಂದಿಲ್ಲದಲೆ ಪೊರೆವ 3

***


No comments:

Post a Comment