..
ವಾದಿರಾಜರು
ವಾದಿರಾಜ ಗುರುರಾಜರ ಕೊಂಡಾಡಿ ಜನಿಪ ಸುಖವನು ಬೇಡ ಪ
ಸೋದೆ ಸ್ಥಳದಲಿ ನಿಂತು ಮೆರೆವನಯ್ಯಹಯವದನನ ಪ್ರಿಯ ಅ.ಪ.
ಮೋದತೀರ್ಥ ಮತವಾರಿಧಿ ಪೂರ್ಣಚಂದ್ರ ಸದ್ಗುಣ ಸಾಂದ್ರಾಮೇದಿನಿಯೊಳಗಿಹ ತೀರ್ಥ ಕ್ಷೇತ್ರವ ಚರಿಸಿ ಸಂತರನುದ್ಧರಿಸಿಸಾದರದಲಿ ಹರಿಮಹಿಮೆಯ ಕೊಂಡಾಡಿ ಪ್ರಬಂಧವನು ಮಾಡಿವಾದಿಗಳೆಂಬುವ ಗಜಕುಲ ಹರ್ಯಕ್ಷನಾಗಿಹ ಹರಿದೀಕ್ಷಾ 1
ಎರಡೀರರುವತ್ತು ವಿದ್ಯಾಪೂರ್ಣನೆನಿಸೀ ದೂಷಕರನು ಜಯಿಸಿಬಿರುದುಗಳನಪಹರಿಸಿದ ಯತಿವರ್ಯ ಹರಕಾರ್ಯ ಧುರ್ಯವರಭೈಷ್ಮಿಶನ ವಿಜಯದ ಕಾವ್ಯವನು ಬಹುಪರಿ ಮಹಿಮೆಯನುವಿರಚಿಸಿ ಕವಿಕುಲ ಮಾನ್ಯನೆನಿಸಿಕೊಂಡ ಹರಿದಾಸ ಪ್ರಚಂಡಾ 2
ಭೂತ ಬ್ರಹ್ಮರಾಕ್ಷಸ ಬಂದಿವರೊಳು ವಾದಿಸಿ ಮಾರ್ಗದೊಳುಸೋತು ಆe್ಞÁಧಾರಕರಾಗಿರುತಿಹರು ಅನುದಿನ ಸೇವಕರುಭೂತಳದ ಜನರು ಬೇಡಿದ ಇಷ್ಟಾರ್ಥ ಕೊಡುವಂಥ ಸಮರ್ಥಧಾರುಣಿಪತಿ ಗೋಪತಿವಿಠಲ ನಿನ್ನೊಶನಾಗಿಹನಲ್ಲ 3
****
No comments:
Post a Comment