by gopalaryaru
ಸಾರವೇನೊ ಸಂಸಾರದೊಳೂಬಾರಿಗು ಬಾರಿಗು ವಿಚಾರಿಸಿ ನೋಡಿದಡತಿಘೋರ ದುಃಖದಾಗರ ನಿಸ್ಸಾರವಲ್ಲದಿದರೊಳೂ ಪ
ಜನನಿಯ ಉದರದಲಿ ಕಿಸುಕುಳದಕುಣಿತೆಯಂದದಲಿ ನವೆದಲ್ಲಿಂದಜನಿಸಿಯಾಯಾಸದಲಿ ಪೇಳಲು ಕೂಡಲನಿತುಬ್ಬಸ ಬಾಲ್ಯದಲಿ ಕೌಮಾರ ಯೌವನದಿ ಗೃಹಕ್ಷೇತ್ರ ವಿತ್ತ ವನಿತಾದಿ ವಿಷಯವೆಂಬಕನಸಿನ ಸಿರಿಯ ನೆಚ್ಚಿ ತೊನೆದುಕೊಂಬರಲ್ಲದೆ 1
ಪೊಲೆಯ ಬೊಂಬೆಯೊಳು ತುಂಬಿದ ಕೀವುಮಲಮೂತ್ರಸಂದೋಹ ತೊಗಲು ರೋಮಎಲು ಮಜ್ಜೆ ಮಾಂಸದವ್ಯೂಹ ಎಷ್ಟು ತೊಳೆದರೂಹೊಲಸು ನಾರುವ ಚೋಹ ಮತ್ತಿದಕೊಂದುಕುಲಗೋತ್ರ ನಾಮರೂಪು ಚಲುವ ಚೆನ್ನಿಗನಿವ ಸಲೆ ಜಾಣನೆಂದು ಮೂಢರುಗಳಹಿಕೊಂಬರಲ್ಲದೆ 2
ಮಡದಿಯಾದರಿಲ್ಲ ಮಕ್ಕಳು ಮಕ್ಕಳಾದರೆಒಡಮೆಲ್ಲವದು ಬರಲು ಸತಿಸುತರುಮಡಿದು ಹೋಗುವ ದುಃಖಂಗಳು ಗಳಿಸಿದರ್ಥಕೆಡುವಾ ಸಂಕ್ಲೇಶಂಗಳು ತನಗೆ ಮುಂಚಿಅಡಸಿ ಬರುವದೊ ಮೃತಿ ಜಡರು ಈ ಬದುಕನೆಚ್ಚಿಸಡಗರ ಬಡುತ ಹಿಗ್ಗಿ ಕೊಡಹಿಕೊಂಬರಲ್ಲದೆ 3
ಬಾಲಕನಾಗ್ಯೊಂದು ಕ್ಷಣವು ಪ್ರಾಯದಿ ಕಾಮಲೋಲುಪನಾಗ್ಯೊಂದು ಕ್ಷಣವು ಧನಾಢ್ಯನೆಂಬಮೂಳ ಹೆಮ್ಮೆ ಒಂದು ಕ್ಷಣವು ದಾರಿದ್ರ್ಯ ಮುಪ್ಪುಜೋಲುವ ತನುವೊಂದು ಕ್ಷಣವು ನಾನಾವೇಷದಾಳಿದ ನಟನಂತಾಡಿ ಕಾಲನ ಬಾುಗೈದುವಬಾಳುವೆಗೆ ಖೂಳಜನರು ವೋಲಾಡಿಕೊಂಬರಲ್ಲದೆ 4
ನೆರೆ ಭೋಗಕೆ ರೋಗಭಯ ಸುತ ಸಂಬಂಧಿನೆರವಿಗೆ ವಿಯೋಗ ಭಯ ದ್ರವ್ಯಕ್ಕೆ ಭೂಪರ ಭಯವು ಚೋರ ಭಯ ಕಾಯಕೆ ಭಯಂಕರನಾದ ಕೃತಾಂತ ಭಯ ತಾಪತ್ರಯವೀಪರಿಯನೇಕ ಚಿಂತೆಯಲ್ಲಿ ಕೊರಗುತುರಿವ ಮನೆಯೊಳಗಿರುವೆ ಸುಖದಲೆಂಬರು ಮೂಕೊರೆಯಮೊಂಡರಲ್ಲದೆ * 5
***
No comments:
Post a Comment