..
ನರಸಿಂಹಗುರುವೆ ನೋಡೈ ಬಾಲನ
ಈಗ ಕರವ ಪಿಡಿದು ರಕ್ಷಿಸೈ ಪ
ತರುಣಿದ್ರೌಪದಿಶಬರಿಯಜಮಿಳತರಳಧ್ರುವಬಲಿನಾಗಭಕ್ತರ
ಮೊರೆಯಲಾಲಿಸಿತಕ್ಷಣದಿಬಂದಹರುಷದಿಸಲಹಿದಾ ಸಿರಿ ಅ.ಪ
ಬರಬಾರದು ನಾಬಂದು ಸಂಸೃತಿಯೆಂಬೊ
ಉರಿವಕಿಚ್ಚಿನೊಳುನಿಂದು
ಸ್ಮರಿಸಬಾರದಕೆಟ್ಟಪಾಪದಿ
ಬೆರತುಸತಿಸುತಬಂಧುಮೋಹದಿ
ಚರಿಸಿ ದೇಶದಿ ನಿನ್ನ ಧ್ಯಾನವ
ಮರತು ವಿಷಯದಿ ಮುಳುಗಿಪೋದೆನು 1
ಗತಿಯಾರು ತೋರೋ ಇಂದು ಮುಂದೆನಗಿನ್ನು
ನತಪಾಲ ನೀನೆ ಎಂದು
ನುತಿಸಿ ಬೇಡುವೆ ಕರವಜೋಡಿಸಿ
ಮತಿವಿಹೀನರಸಂಗಜಾರಿಸಿ
ಹಿತದಿ ನಿನ್ನಡಿ ನೋಡಿ ಯಜಿಸುವ
ಮತಿಯ ನೀನೆನಗಿತ್ತು ಬೇಗದಿ 2
ಮರೆಹೊಕ್ಕೆ ನಿನ್ನಡಿಯ ಮತ್ರ್ಯರ
ಬಾಧೆ ಘನವಾಗಿ ಇರುವದಯ್ಯ
ಹೊರಗೆ ಒಳಗೊಂದೊಂದು ಯೋಚನೆ
ಹರಡಿ ವೈಷ್ಣವರನ್ನು ದುಃಖದೊ
ಳಿರಿಸಿ ತೋಷಪಡುವ ಪಾಪಾತ್ಮರು
ನಿರಂತರ ವ್ಯಾಪಿಸಿರ್ಪುದ 3
ಶ್ರೀಶನೀಕೋಪಬಿಟ್ಟುಸಂತತರಂಗ
ದಾಸನೋಳ್ಮನವನಿಟ್ಟೂ
ಭಾಸುರಾತ್ಮನೆ ಬಂದ ವ್ಯಥೆಗಳ
ನಾಶಮಾಡದೆ ಬಿಟ್ಟರಿಳೆಯೊಳು
ದೋಷತಪ್ಪದು ನಿನಗೆ ಭಕ್ತನು
ಪೋಷ ಯದುಗಿರಿವಾಸಪರಮನೆ4
***
No comments:
Post a Comment