Wednesday, 1 September 2021

ನಂಬಿದೆ ತವ ಚರಣ ಸಲಹೋ ಅಂಬುಧಿಸುತೆ ರಮಣ ankita shyamasundara

..

ನಂಬಿದೆ ತವ ಚರಣ ಸಲಹೋ | ಅಂಬುಧಿಸುತೆ ರಮಣ

ಅಂಬುಜ ಸಂಭವ ಶಂಭು ವಿನುತ ಮನ |

ದ್ಹಂಬಲವನು ಸಲಿಸೆಂದು ನಿರುತ ನೆರೆ ಪ


ತಾವರೆದಳನಯನಾ ಭವಹರಣ

ತವಕದಿ ಸುಜ್ಞಾನವಗರೆಯೋ 1


ತಂದೆ ನಾ ಜನಿಸುತ ಭೂಸುರ ಜನ್ಮದಿ

ಹಿಂದಿನ ಸುಕೃತದಲಿ ಬಂದೆನೊ ಭುವಿಯೊಳ್

ಮಂದರ ಸಂಗದಿ ಕೊಂದಿದೆ ನಿನ್ನನು

ನೊಂದೆನೋ ಕರುಣಿಸು 2


ಹೇಸಿ ಸಂಸಾರದ ಪಾಶÀವ ಬಿಡಿಸುತ

ಶ್ರೀಶಾಮಸುಂದರವಿಠಲನೆ

ದೋಷವ ನೋಡದೆ | ಪೋಷಿಸು ಮರೆಯದಲೆ

ವಾಸುಕಿಶಯನನೆ 3

***

 

No comments:

Post a Comment