ರಾಗ - : ತಾಳ -
ಶ್ರೀ ರಘುವರತೇ ನಮೋ ನಮೋ ll ಪ ll
ಆಶ್ರಿತ ಪರಿಪಾಲತೇ ನಮೋ ನಮೋ ll ಅ ಪ ll
ಸರಿಸಿಜಭವಪಿತ ಸರಸಿಜಲೋಚನ
ಪರಮಪುರುಷ ಖಗಪತಿ ಗಮನ
ಸುರಕಿನ್ನರ ಭೂಸುರನರವರನುತ
ಸೂರಿಜನಪ್ರಿಯತೇ ನಮೋ ನಮೋ ll ೧ ll
ಮದನಕೋಟಿ ಲಾವಣ್ಯ ಶರಣ್ಯ ನಾ
ರದ ವೀಣಾಗಾನ ವಿಲೋಲ
ಮುದತೀರ್ಥವರದ ಮುನಿಜನಪಾಲಕ
ಸದಮಲಾತ್ಮಕತೇ ನಮೋ ನಮೋ ll ೨ ll
ರಾಮಭೂವರ ವಿರಾದಾಂತಕಬಲ-
ರಾಮಾನುಜ ರಘುರಾಮವಿಭೋ
ಸೋಮಸೂರ್ಯನಯನ ಶುಭ-
ತಮ ಶ್ರೀ ಗುರುರಾಮವಿಟ್ಠಲತೇ ನಮೋ ll ೩ ll
***
No comments:
Post a Comment