Wednesday, 1 September 2021

ಬಾರೈ ಪ್ರಭುವೆ ಬಾರೈ ಪ್ರಭುವೆ ankita shyamasundara

 ..

ಬಾರೈ ಪ್ರಭುವೆ ಬಾರೈ ಪ್ರಭುವೆ ಪ


ತೋರೈ ಹರಿಪಾದವ ಗುರುವೆ

ತವಾಂಘ್ರಿ ಕಮಲ ನಂಬಿದೆ

ಭವ ಬಂಧನ ಹರಿಸಿ ಕರುಣದಿ

ಜವನ ಭವನ ಬಿಡಿಸೋ ದೀನ

ದಿವಿಜ ತರುವೆ1


ಹರಿಕಥಾ ಸುಧಾ ಸಾರ

ವರ ರಹಸ್ಯವ ಪೊರೆ

ಕರುಣದಿಂದಲರುಹಿಸದಾ

ಪೊರೆಯೋ ವಿಭುವೆ 2


ಮಂದರ ಗಿರಿಧಾರಿ ಶಾಮ

ಸುಂದರ ಸುಪ್ರೇಮ ಪಾತ್ರ

ಕಂದನನುದಾಶಿಸುವದು

ತಂದೆಗೆ ಥರವೆ 3

***


No comments:

Post a Comment