ಶ್ರೀಪುರಂದರದಾಸರು. check rangavittla also. already audio is there
ನಾ ನಿನಗೇನು ಬೇಡುವುದಿಲ್ಲ
ಎನ್ನ ಹೃದಯ ಕಮಲದೊಳು ನೆಲೆಸಿರು ಹರಿಯೆ ll ಪ ll
ಶಿರ ನಿನ್ನ ಚರಣಕ್ಕೆರಗಲಿ ಚಕ್ಷು
ಎರಕದಿಂದಲಿ ನಿನ್ನ ನೋಡಲಿ ಹರಿಯೆ l
ನಿರುಮಾಲ್ಯ ನಾಸ ಘ್ರಾಣಿಸಲಿ ಎನ್ನ
ಕರಣ ಗೀತಂಗಳ ಕೇಳಲಿ ಹರಿಯೆ ll 1 ll
ನಾಲಿಗೆ ನಿನ್ನ ಕೊಂಡಾಡಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ l
ಕಾಲು ತೀರ್ಥ ಯಾತ್ರೆಗೆ ಪೋಗಲಿ, ಮನ
ಓಲೈಸಿ ನಿನ್ನನು ಸ್ಮರಿಸಲಿ ಹರಿಯೆ ll 2 ll
ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನ
ಭಕ್ತ ಜನರ ಸಂಗ ದೊರಕಲಿ ಹರಿಯೆ
ತತ್ತ್ವಯೋಗಾಭ್ಯಾಸಕ್ಕಾಗಲಿ ಉಕ್ತಿ
ಸತ್ಯಮೂರುತಿ ನಮ್ಮ ಪುರಂದರವಿಟ್ಠಲ ll 3 ll
***
No comments:
Post a Comment