Monday, 12 April 2021

ಶ್ರೀಪಾಂಡುರಂಗ ನಿನ್ನ ನಂಬಿದೆನೊ ಯನ್ನ ankita mahipati

ಶ್ರೀ ಪಾಂಡುರಂಗ ನಿನ್ನ ನಂಬಿದೆನೊ ಎನ್ನ l

ಕಾಪಾಡೊ ಕರುಣಾ ಸಂಪನ್ನ ಹೇ ಪಾವನ್ನಾ ll ಪ ll


ನೀನಲ್ಲದಿನ್ನಾರು ಯನಗ್ಯಾರೊ ಹಿತದವರೊ l

ನೀನೇವೆ ಕಣ್ಣಿಗೆ ಕಟ್ಟಿರು ಸುಖ ಸುರತರು ll 1 ll


ಕೊಡು ನಿನ್ನ ಕಾಂಬೊ ವ್ಯಕ್ತಿಯೆಲ್ಲೆ ನಾನಾ ಯುಕ್ತಿ l

ಕೊಡು ನಿನ್ನಲ್ಲೇವೆ ದೃಢ ಭಕುತಿ ಎನಗಿಂದೆ ಮುಕುತಿ ll 2 ll


ವಿಟ್ಠಲ ವೇದವ್ಯಾಸಾ ನಾನು ನಿನ್ನ ದಾಸಾ l

ಘಟ್ಯಾಗಿ ತ್ವತ್ ಸ್ಮೃತಿ ಕೊಡು ಲೇಸಾ ಹೇ ಮಹಿದಾಸ ll 3 ll

***

ರಾಗ - : ತಾಳ -


ಶ್ರೀ ಪಾಂಡುರಂಗ ನಿನ್ನ ನಂಬಿದೆನೊ ಯನ್ನ l

ಕಾಪಾಡೊ ಕರುಣಾ ಸಂಪನ್ನ ಹೇ ಪಾವನ್ನಾ ll ಪ ll


ನೀನಲ್ಲದಿನ್ಯಾರು ಯನಗ್ಯಾರೊ ಹಿತದವರೊ l

ನೀನೇವೆ ಕಣ್ಣಿಗೆ ಸುಖ ಸುರತರು ll 1 ll


ಕೊಡು ನಿನ್ನ ಕಾಂಬೊ ವ್ಯಕ್ತಿಯಲ್ಲೆ ನಾನಾ ಯುಕ್ತಿ l

ಕೊಡು ನಿನ್ನಲ್ಲೇವೆ ದೃಢ ಭಕುತಿ ಎನಗಿಂದೆ ಮುಕುತಿ ll 2 ll


ವಿಟ್ಠಲ ವೇದವ್ಯಾಸಾ ನಾನು ನಿನ್ನ ದಾಸಾ l

ಘಟ್ಯಾಗಿ ತ್ವತ್ ಸ್ಮೃತಿ ಕೊಡು ಲೇಸಾ ಹೇ ಮಹಿದಾಸ ll 3 ll

***


No comments:

Post a Comment