Monday, 12 April 2021

ನರಸಿಂಹನಿಗೆ ವಂದಿಪೆನೋ ankita raghurama vittala

 ರಾಗ – : ತಾಳ – 


ನರಸಿಂಹನಿಗೆ ವಂದಿಪೆನೋ l ನಿನ್ನ

ಕರುಣ ಕವಚ ಎನ್ನ ಹರಣಕ್ಕೆ ತೊಡಿಸಯ್ಯಾ ll ಪ ll


ಪರಮಪಾವನರೇಯ ಕರಿಗಿರಿವಾಸನೇ 

ತರಳಾನ ಮೊರೆ ಕೇಳಿ ಕರುಣದಿಂದಲಿ ಕಾಯೋ ll ಅ ಪ ll


ಭಕುತರ ಮನವ ಪರಿಕಿಸುತಾ l ದೇವ

ಯುಕುತಿ ಇಂದಲಿ ತೋರಿ ಭಕುತರ ಪೊರೆಯುವ 

ಅತುಳ ಪರಾಕ್ರಮಿ ಅನಿಮೀತ ಗುಣನಿಧಿ

ಪತಿತ ಪಾವನ ದೇವ ಮತಿ ಇತ್ತು ಸಲಹಯ್ಯಾ ll 1 ll


ಪರಮ ಭಕುತನ ಸೇವೆ ಪೊಂದೀ l ದೇವ

ಮತಿಹೀನರಿಗೆ ಸನ್ಮತಿಯಾನೆ ಇತ್ತೂ 

ಉತ್ತಮ ಭಕುತರಿಗೆಲ್ಲ ಅತಿಶಯದಲಿ ತೋರ್ಪೆ

ಗತಿ ನೀನೆಯೆಂದು ನಂಬಿ ಬಂದಿಹೆನಯ್ಯಾ ll 2 ll


ದಯಾ ರೂಪವನು ಪೊಂದಿ ಮೆರೆದೇ l ದೇವ 

ಕರಿಗಿರಿ ಕ್ಷೇತ್ರದಿ ನಿಂದೇ

ಸ್ವಾಮಿ ಯುಕುತದಿ ತೋರುತ ಭಕುತರ ಸಲಹುತ

ರಘುರಾಮವಿಟ್ಠಲನೆ ವ್ಯಕುತವಾಗೋ ದೇವಾ ll 3 ll

***


No comments:

Post a Comment