Monday, 12 April 2021

ನೋಡಿದೇ ನಾ ನೋಡಿದೆ ನೋಡಿದೇ ನಾ ನೋಡಿದೆ ankita gurujagannatha vittala vyasaraja stutih

✍️ಕೌತಾಳಂ ಶ್ರೀ ಗುರುಜಗನ್ನಾಥ ದಾಸರ ರಚನೆ.


ನೋಡಿದೇ ನಾ ನೋಡಿದೆ || ಪ ||


 ನೋಡಿದೇ ನಾ ನೋಡಿದೆರಾಯರ|

ನೋಡಿದೆನೊ ಶುಭಕಾಯರಾ|

ಮಾಡಿದೆ ಶಿರಬಾಗಿ ನಮನವ

ಬೇಡಿದರ್ಥವ ಕೊಡುವ ವಡೆಯರ || ಅ.ಪ ||


ಭಿದುರ ಮಯವಾದ ವೇದಿ ಕಾಗ್ರದಿ|

ಚದುರ ದಿಕ್ಕಿಲಿ ಶೋಭಿಸುವ ಶುಭ|

ತ್ರಿದಿಶ ವರ ಮುಖ ದಿವಿಜ ರೈವರು|

ಮುದದಿ ಇರುತಿಹ ರಿವರ ಮಧ್ಯದಿ

ಪದುಮನಾಭನ ಚತುರ ರೂಪವ|

ಹೃದಯ ಮಂದಿರದಲ್ಲಿ ಭಜಿಸುವ|

ಪದುಮನಾಭನ ಪ್ರೀತಿ ಪಾತ್ರರ

ಸದ ಮಲಾ ಗುರು ವ್ಯಾಸರಾಯರ || 1 ||


ಶ್ರೀನಿವಾಸನು ಶಿರಸಿ ನೊಳಗಿಹ|

ಆನ ನಾಗ್ರದಿ ಬಾದರಾಯಣ|

ಜ್ಞಾನಮಯ ಶಿರಿ ಹಂಸ ಅಚ್ಯುತ|

ಮೌನಿ ಕಪಿಲಾನಂತ ಭಾರ್ಗವ|

ಮಾನನಿಧಿ ಹಯಗ್ರೀವ ಹಂಸನು|

ದಾನವಾಂತಕ ರಾಮಚಂದ್ರ ಸದಾನುರಾಗದಿ ತೆನೆಗಳಲ್ಲಿ|

ಭಾನುನಂದದಿ ಪೊಳೆವ ಬಗೆಯನು || 2 ||


ಮಧ್ಯ ಭಾಗದಿ ಕೃಷ್ಣ ದೇವನು|

ಇದ್ದು ಇವರನು ಸೇವೆ ಮಾಳ್ಪರ|

ಶುದ್ಧ ಮಾಡವರರ್ಥ ಸರ್ವದ|

ಶಿದ್ಧಿಮಾಡಿ ಇವರನತಿ ಪ್ರ

ಶಿದ್ಧ ಮಾಡಿವರಲ್ಲಿ| ಪ್ರತ್ಯಕ್ಷ

ಸಿದ್ಧ ನಾಗಿರುತಿಹನು ನಮ್ಮ ಗುರು|

ಮಧ್ವ ಗುರುಜಗನ್ನಾಥವಿಠಲನ|

ಮಧ್ಯ ಹೃದಯದಿ ಭಜಿಪ ಗುರುಗಳ||

***



No comments:

Post a Comment