Wednesday, 1 September 2021

ಕರ್ಪೂದಾರುತಿ ತಾರೆ ಕೊಪ್ಪರದಪ್ಪನಿಗೆ ಸರ್ಪಸುತಲ್ವಗೆ ಮುಪ್ಪಾದ ದೇವನಿಗೆ ankita shyamasundara

 ..

ಕರ್ಪೂರದಾರತಿ ತಾರೆ ಕೊಪ್ಪರದಪ್ಪಗೆ 

ಸರ್ಪಸುತಲ್ಪಗೆ ಮುಪ್ಪಾದ ದೇವಗೆ l

ಅಪ್ರತಿಮಹಿಮಗೆ ll ಪ ll


ನೀರೆ l ನಲುವಿಂದಲಿ l ನೀ ಮುದದಿಂದಲಿ l ಸಖೀ ನಿಜಮನದಲಿ ll ಅ ಪ ll


ಪಾಲಾಕ್ಷ ವಂದಿತ ಪಾದ 

ಪಾಲಾಬ್ಧಿವಾಸಗೆ l ಪಾಂಚಾಲಿ ವರದರಂಗಗೆ l ಶಿಶು- l

ಪಾಲ ಖರಮುರ ಹಾರಿಗೆ l

ಕಾಳಿಂಗನ ಫಣಿಯಲ್ಲಿ ತಥೈ ಎಂದು ಕುಣಿದವಗೆ l

ಬಾಲೆಯರಾಲಯ ಪೊಕ್ಕು ಪಾಲು ಬೆಣ್ಣೆ ಕದ್ದವಗೆ l ಗೋ- 

ಪಾಲಕೃಷ್ಣಗೆ ನೀರೆ ನಲುವಿಂದಲಿ l

ನೀ ಮುದದಿಂದಲಿ l ಸಖಿ ನಿಜಮನದಲಿ ll 1 ll


ದೇವಾಧಿದೇವನಾದ ಭಾವಜನಯ್ಯಗೆ l ವಸು

ದೇವದೇವಕಿ ಕಂದಗೆ l ಭೂದೇವೌಕ್ಷ ವಂದ್ಯಗೆ l

ಪಾವನ್ನ ಮೂರುತಿಯಾದ ಶ್ರೀದೇವಿ ಅರಸಗೆ l

ಗೋವಳರಿಂದ ಕೂಡಿ ಗೋ ಹಿಂಡು ಕಾಯ್ದವಗೆ l

ದೇವಾರಿ ವೈರಿಗೆ ಶ್ರೀ ವಾಸುದೇವಗೆ ll ನೀರೆ ll 2 ll


ಮಂಗಳಾಂಗ ಗಂಗಾಜನಕ l

ತುಂಗ ವಿಕ್ರಮದೇವಗೆ l ಜಯ

ಸಂಗೀತ ಪ್ರಿಯಲೋಲಗೆ l ಪತಂಗಜ ವೈರಿ ದೇವಗೆ l 

ಶೃಂಗಾರದಿ ಶ್ಯಾಮಸುಂದರ ಗಾಂಗೇಯಾಂಬರಧಾರಿಗೆ ll 3 ll

***


ಕರ್ಪೂದಾರುತಿ ತಾರೆ ಕೊಪ್ಪರದಪ್ಪನಿಗೆ

ಸರ್ಪಸುತಲ್ವಗೆ ಮುಪ್ಪಾದ ದೇವನಿಗೆ ಅಪ್ರತಿಮರಿಹಿಮೆಗೆ ಪ


ನೀರೆ ನಲುವಿಂದಲಿ ನೀಮುದದಿಂದಲಿ | ಸಖಿ ನಿಜಮನದಲಿ ಅ.ಪ


ಫಾಲಾಕ್ಷ ವಂದಿತಪಾದ

ಪಾಲಾಬ್ಧಿವಾಸಗೆ | ಪಾಂಚಾಲಿವರದರಂಗಗೆ |

ಶಿಶುಪಾಲ ಖರಮುರ ಹಾರಿಗೆ |

ಕಾಳಿಂಗನ ಫಣೆಯಲ್ಲಿ ತಥೈವಿಎಂದು ಕುಣಿದವಗೆ |

ಬಾಲೆಯರಾಲಯ ಪೊಕ್ಕು ಪಾಲು ಬೆಣ್ಣೆ ಕದ್ದವಗೆ |

ಗೋಪಾಲಕೃಷ್ಣನಿಗೆ ನೀರೆ ನಲುವಿಂದಲಿ |

ನೀ ಮುದದಿಂದಲಿ | ಸಖಿ ನಿಜಮನದಲಿ 1


ದೇವಾಧಿದೇವನಾದ ಭಾವಜನಯ್ಯನಿಗೆ |

ವÀಸುದೇವದೇವಕಿ ಕಂದಗೆ ಭೂದೇವೌಕ್ಷವಂದ್ಯಗೆ |

ಪಾವನ್ನ ಮೂರುತಿಯಾದ ಶ್ರೀದೇವಿ ಅರಸಗೆ |

ಗೋವಳರಿಂಧ ಕೂಡಿ ಗೋಹಿಂಡು ಕಾಯ್ದವಗೆ |

ದೇವಾರಿ ವೈರಿಗೆ ಶ್ರೀವಾಸುದೇವಗೆ 2


ಮಂಗಳಾಂಗ ಗಂಗಾಜನಕ |

ತುಂಗವಿಕ್ರಮದೇವಗೆ | ಜಯ

ಸಂಗೀತ ಪ್ರಿಯಲೋಲಗೆ | ಪತಂಗಜವೈರಿ ದೇವಗೆ

ಶೃಂಗಾರದಿ ಶಾಮಸುಂದರ ಗಾಂಗೆಯಂಬರಧಾರಿಗೆ 3

***


No comments:

Post a Comment