Wednesday 1 September 2021

ಪಾಲಿಸೋ ದೇವ ಮೂಲೋಕ ಕಾವ ಎಲ್ಲರೊಳ ಗೀವ ಶ್ರೀ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಪಾಲಿಸೊ ದೇವ ಮೂಲೋಕ ಕಾವ ಎಲ್ಲರೊಳ ಗೀವ ಶ್ರೀ ಲಕ್ಷುಮಿಯ ಜೀವ ಪ 


ಮುನಿಜನ ಪಾಲ ಘನಸುಖಲೋಲ ಅನಾಥರನುಕೂಲ ದೀನದಯಾಳ 1 

ಕರುಣಾಸಾಗರ ಪರಮ ಉದಾರ ದುರಿತ ಸಂಹಾರ 2 

ಸಿರಿಲೋಲ ಭೂಷಣ ಹರಿನಾರಾಯಣ ತರಳ ಮಹಿಪತಿ ಪ್ರಾಣ ಹೊರಿಯೋ ನೀ ಪೂರ್ಣ 3

***


No comments:

Post a Comment