Wednesday, 16 June 2021

ಹಸೆಗೇಳೈ ಶ್ರೀನಿವಾಸ ಮೂರ್ತಿ ನೀ ಬಿಸಜಾಲಯೆ ಸಹಿತ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 

ಹಸೆಗೇಳೈ ಶ್ರೀನಿವಾಸ ಮೂರ್ತಿ ನೀ

ಬಿಸಜಾಲಯೆ ಸಹಿತ    ಪ


ಎಸೆವ ಪೀಠಕೆ ನಸುನಗುತೀಗಲು

ಕುಸುಮಾಸ್ತ್ರನ ತಾತ    ಅ.ಪ


ಬ್ರಹಾದಿ ಸುರರ್ ಪ್ರಾರ್ಥನೆ ಗೈವರ್

ನಿಮ್ಮಡಿಗಳ ಬೇಡಿ

ಧರ್ಮಾನುಜ ಸಾರಥಿ ಮನವಲಿದು

ತ್ವರಿತದಿ ದಯಮಾಡಿ 

1

ಓಲೆ ಬರೆದು ತಾ ಒಲಿಸಿಕೊಂಡ

ಳಾಲೋಲ ನಯನೆ ನಿನ್ನಾ

ಫಾಲಾಕ್ಷನ ಸಖ ಪುರಷೋತ್ತಮ ಜಗ

ತ್ಪಾಲನ ಸಂಪನ್ನ 

2

ಸಾಮಜ ರಾಜ ವರದ ಸುರ

ಪಾನುಜ ಸರ್ವಾಂತರ್ಯಾಮಿ

ರಮಣೀಯ ಮಹಿಮಾರ್ಣವ ಶ್ರೀಗುರು

ರಾಮವಿಠಲ ಸ್ವಾಮಿ 

3

***


No comments:

Post a Comment