ಶ್ರೀ ಗುರುರಾಮವಿಠಲ ದಾಸರ ರಚನೆ
ಹಸೆಗೆ ಬಾರೊ ಹರುಷಬೀರೊ ಬಿಸಜನಾಭನೇ ಪ
ಶಶಿಯ ಸೋದರಿ ಸಹಿತವಾಗಿ ಶಾಮಲಾಂಗನೇ ಅ.ಪ
ರತ್ನಖಚಿತ ಪೀಠವಿರಿಸಿ ರಮಣಿ ಮಣಿಯರೂ
ಕುತ್ನಿ ಪಟ್ಟಾವಳಿಯ ಹಾಸಿ ಕೋರಿ ಪ್ರಾರ್ಥಿಪರೂ
1
ಭೇರಿ ಮೃದಂಗ ನಾಗಸ್ವರ ನಗಾರಿ ಕಹಳೆಗಳ್
ಧಾರುಣಿ ಸುರವೇದ ಘೋಷ ವಿಸ್ತಾರವಾಗಿರಲ್
2
ಹಳದಿ ಕುಂಕುಮಾಕ್ಷತೆ ಗಂಧ ಕಳಶ ಕನ್ನಡಿ
ಹೊಳೆಯೆ ತಟ್ಟಿಯೋಳ್ ಸುತ್ತ ಜ್ಯೋತಿ ಬೆಳಗುವುದು
3
ವಿಧಿ ಶಂಕರರ್ಕೊಡಲು ಕರವನೊದಗಿ ಪಾಶ್ರ್ವದಿ
ಮುದದಿ ನಸು ನಗುತ ಬಲದ ಪದವು ಮುಂದಾಗಿ
4
ಶರಣ ಜನರಭೀಷ್ಟಗಳನು ಸಲಿಸುವಾತನೇ
ಗುರುರಾಮವಿಠಲ ಸರ್ವೇಶ ಪುರುಷೋತ್ತಮನೆ
5
***
No comments:
Post a Comment