Wednesday, 1 September 2021

ಕೋಲ ದೇವ ತನಯ ಕೂಲ ಸುನಿಲಯ ಪಾಲಿಸು ಜೀಯಾ ನೀ ಪಾಲಿಸು ಜೀಯಾ ankita shyamasundara

 ..

ಕೋಲದೇವ ತನಯ ಕೂಲ ಸುನಿಲಯ

ಪಾಲಿಸು ಜೀಯಾ ನೀ ಪಾಲಿಸು ಜೀಯಾ ಪ


ದೇವಸ್ವಭಾವ ಮಹಿದೇವ ಸಂಸೇವಿತ

ಪಾವನ ಸುಚರಿತ ದೇವ ಮುನಿಗತಿಪ್ರೀತ 1


ದೈಶಿಕ ಕುಲನಾಥ ಪೂಶರನಿರ್ಜಿತ |

ಭಾಸುರ ಕಾಷಾಯ ವಾಸ ಭೂಷ ವ್ಯಾಸರಾಯಾ 2


ಶಾಮಸುಂದರ ಮೂಲರಾಮಪದಾರ್ಚಕ

ಕಾಮ ಕಾರ್ಮುಕ ಗಜಸ್ತೋಮಸಿಂಗ ಮಂಗಳಾಂಗ 3

***


No comments:

Post a Comment