Friday, 27 December 2019

ತಂದೆ ಪುರಂದರದಾಸರ ಸ್ಮರಿಸುವೆ ankita prasannavenkata purandara dasa stutih

ರಾಗ - : ತಾಳ -

ತಂದೆ ಪುರಂದರದಾಸರ ಸ್ಮರಿಸುವೆ ಎನ್ನ
ಮಂದಮತಿಗಳೆದು ಹರಿಭಟನೆನಿಸುವೆ ll ಪ ll

ಗುರು ವ್ಯಾಸರಾಜರ ಚರಣಾಬ್ಜ ಷಟ್ಚರಣನ 
ವಿರತಿ ಭಕುತಿ ಜ್ಞಾನದಾರ್ಣವನ
ವರ ಉಪನಿಷದ್ವಾರಿನಿಧಿಗೆ ತಿಮಿಂಗಿಲನಹನ 
ಧರೆಯ ಕವಿಕುಲ ಶಿಖಾಮಣಿಯೆನಿಪನ ll ೧ ll

ದಿನ ದಿನ ಯದೃಚ್ಛಾರ್ಥಲಾಭದಲಿ ತುಷ್ಟನ
ಕನಕಲೋಷ್ಠ ಸಮಾನದೀಕ್ಷಿಸುವನ
ಘನ ಸಿದ್ಧಿಗಳು ತಾವೆ ಬರಲೊಡಂಬಡದನ ಹರಿ
ಗುಣ ಕೀರ್ತನೆಯಲ್ಲಿ ಪರವಶದಿಹನ ll ೨ ll

ಭವಜಲದಿ ಗೋಷ್ಪದಕೆ ಸರಿದಾಟಿ ಕಾಮ ಕ್ರೋ
ಧವ ಮೆಟ್ಟಿ ಭಕ್ತಿಸುಧೆಯುಂಡು ತೇಗಿ 
ಭುವಿಯಲ್ಲಿ ನಿಜಕೀರ್ತಿಯನು ಹರಹಿ ಪವನಮತ 
ದವರೆನಿಪ ದಾಸರಿಗೆ ತವರೂಪ ತೋರಿದನ ll ೩ ll

ಕವನೋಕ್ತಿ ಮಳೆಗರೆದು ಹರಿದಾಸ ಪೈರ್ಗಳಿಗೆ 
ಅವಿರಳಾನಂದವಿತ್ತರ್ಥಿಸುವನ 
ನವಭಕುತಿ ಮನಗಂಡು ಸಮಯದಾನಂದಪುರ ಪ 
ಥವನು ತೋರಿಸಿದಂಥ ಬಹುಕೃಪಾಕರನ ll ೪ ll

ಗೀತ ಠಾಯಿ ಸುಳಾದ್ಯುಗಾಭೋಗ ಪದ್ಯಪದ 
ವ್ರಾತ ಪ್ರಬಂಧ ರಚಿಸಿ ವಿಟ್ಠಲನ
ಪ್ರೀತಿ ಬಡಿಸಿ ಕಂಡು ನಲಿವ ವೈಷ್ಣವಾಗ್ರ
ನಾಥ ಪ್ರಸನ್ವೆಂಕಟ ಕೃಷ್ಣಪ್ರಿಯನ ll ೫ ll
**

by ಪ್ರಸನ್ನವೆಂಕಟದಾಸರು
ತಂದೆ ಪುರಂದರದಾಸರ ಸ್ಮರಿಸುವೆ ಎನ್ನಮಂದಮತಿಗಳೆದು ಹರಿಭಟನೆನಿಸುವೆ ಪ.

ಗುರುವ್ಯಾಸರಾಜರ ಚರಣಾಬ್ಜ ಷಟ್ಚರಣನವಿರತಿಭಕುತಿ ಜ್ಞಾನದಾರ್ಣವನವರಉಪನಿಷದ್ವಾರಿನಿಧಿಗೆ ತಿಮಿಂಗಿಲನಹನಧರೆಯ ಕವಿಕುಲ ಶಿಖಾಮಣಿಯೆನಿಪನ 1

ದಿನ ದಿನ ಯದೃಚ್ಛಾರ್ಥಲಾಭದಲಿ ತುಷ್ಟನಕನಕಲೋಷ್ಠ ಸಮಾನದೀಕ್ಷಿಸುವನಘನಸಿದ್ಧಿಗಳು ತಾವೆ ಬರಲೊಡಂಬಡದನಹರಿಗುಣಕೀರ್ತನೆಯಲ್ಲಿ ಪರವಶದಿಹನ2

ಭವಜಲಧಿ ಗೋಷ್ಪದಕೆ ಸರಿದಾಟಿ ಕಾಮ ಕ್ರೋಧವಮೆಟ್ಟಿ ಭಕ್ತಿಸುಧೆಯುಂಡು ತೇಗಿಭುವಿಯಲ್ಲಿ ನಿಜಕೀರ್ತಿಯನು ಹರಹಿ ಪವನಮತದವರೆನಿಪ ದಾಸರಿಗೆ ತವರೂಪ ತೋರಿದನ 3

ಕವನೋಕ್ತಿ ಮಳೆಗರೆದು ಹರಿದಾಸ ಪೈರ್ಗಳಿಗೆಅವಿರಳಾನಂದವಿತ್ತಥಿರ್üಸುವನನವಭಕುತಿ ಮನಗಂಡು ಸವೆಯದಾನಂದಪುರ ಪಥವನು ತೋರಿಸಿದಂಥ ಬಹುಕೃಪಾಕರನ 4

ಗೀತ ಠಾಯಿ ಸುಳಾದ್ಯುಗಾಭೋಗ ಪದ್ಯಪದವ್ರಾತಪ್ರಬಂಧ ರಚಿಸಿ ವಿಠಲನಪ್ರೀತಿ ಬಡಿಸಿ ಕಂಡು ನಲಿವ ವೈಷ್ಣವಾಗ್ರನಾಥ ಪ್ರಸನ್ವೆಂಕಟ ಕೃಷ್ಣಪ್ರಿಯನ 5
*********

No comments:

Post a Comment