Saturday 1 May 2021

ಕೊಂಡಾಡಬಹುದೆ ಯತೀಂದ್ರ ಪಾಂಡವ ಪ್ರಿಯನಾ ಭಜಕ ವಾದಿರಾಜ ankita vaikunta vittala vadiraja stutih

 ( 24.02.21 ಬುಧವಾರ  ) ಶ್ರೀ ಭಾವಿ ವಾಯುದೇವರ / ಶ್ರೀ ಭಾವಿ ಬ್ರಹ್ಮದೇವರಾದ ಶ್ರೀ ವಾದಿರಾಜ ಗುರುಸಾರ್ವಭೌಮರ ಜನುಮದಿನ "

" ಹರಿದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ವಾದಿರಾಜರ ಸ್ತೋತ್ರ  "

ರಚನೆ : ಶ್ರೀ ವೈಕುಂಠ ದಾಸರು 

ರಾಗ : ಮಖಾರಿ  ತಾಳ : ಝ೦ಪೆ 


ಕೊಂಡಾಡಬಹುದೆ ಯತೀಂದ್ರ ।

ಪಾಂಡವ ಪ್ರಿಯನಾ ಭಜಕ -

ವಾದಿರಾಜ ಯತೀ ।। ಪಲ್ಲವಿ ।।


ನಾನಾ ಜನುಮದಾ ।

ಯೋನಿ ಮುಖದಲಿ ಬಂದು ।

ಮಾನವಳಿದು ಜ್ಞಾನ ಶೂನ್ಯನಾಗಿ ।।

ದೀನ ಮನದಾ ಮೂಢ -

ಮನುಷ್ಯನಾಗಿಹೆ ।

ಹೀನ ಅಹಂಕಾರ ಪೂರಿತ -

ದೋಷಿಯಾ ।। ಚರಣ ।।


ಅರಿಷಡ್ವರ್ಗದೊಳು ಶಿಲುಕಿ -

ನರ ಗುರಿಯಾಗಿ ।

ಪರರ ವಾರ್ತಿಯ ಸವಿವ -

ಹಗಲು ಉರಳೂ ।

ದುರುಳ ದುಶ್ಚೇಷ್ಠಿಕನು 

ಬಹುದುರಾತ್ಮನು ನಾನು ।

ಗುರು ಹಿರಿಯರಿಗೆ ಎರಗದ 

ಗೂಢ ಪಾಪಿಯನು ।। ಚರಣ ।।


ಒಡೆಯ ವೈಕುಂಠ -

ವಿಠ್ಠಲನ ಭಜಿಸದೆ  ।

ಪೊಡವಿಯೊಳು ಕ್ಷುದ್ರ -

ದೈವಗಳಿಗೆಲ್ಲ ।

ಪೊಡಮಡುತಿಹೆ ಸ್ವಾಮಿ 

ದ್ರೋಹಿಯಾ ಗರುವಿಯಾ ।

ಕಡು  ಪಾತಕನ್ನ ನಡತಿಯನು -

ನೀನರಿಯದಲೆ ।। ಚರಣ ।।

***


No comments:

Post a Comment