..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ನಾನೇನ ಮಾಡಿದೆ ತಪ್ಪುಗಳನ್ನ
ನಾನೇನ ಮಾಡಿದೆ ದೇವರದೇವ ಪ
ನಿನ್ನ ದಾಸರ ತಪ್ಪನೆಣಿಸದೆ ಪೊರೆಯುವೆ
ನಾನೊಬ್ಬ ದಾಸನೆಂದರಿದು ನೀ ಪೊರೆಯೊ 1
ಭೃಗುವಂತೆ ನಿನ್ನಯ ಎದೆಗೆ ತುಳಿಯಲಿಲ್ಲ
ನಗವೈರಿಯಂತೆ ಯುದ್ಧವ ಮಾಡಲಿಲ್ಲ 2
ಅಂಗಾಧಿಪತಿಯಂತೆ ಕೊಂದೆನೆಂದರಿತಿಲ್ಲ
ಗಂಗೆಯ ಸುತನಂತೆ ಫಣಿಗೆ ಹೊಡೆಯಲಿಲ್ಲ 3
ನಿನ್ನಣ್ಣನಂತೆ ನೀ ವಂಚಿಸಿದೆಯೆಂದು
ನಿನ್ನ ಬಿಟ್ಟನ್ಯ ದೇಶಕೆ ಪೋಗಲಿಲ್ಲಾ 4
ಭಾವ ಫಲ್ಗುಣ ವಿಪ್ರಶಿಶುವ ಪಾಲಿಪೆನೆಂಬ
ಭಾವದಿ ನುಡಿದಂತೆ ನಿನಗೇನು ಪೇಳಿಲ್ಲ 5
ನಿನ್ನಾ ಕುವರರು ಸುಭದ್ರೆಯ ಮದುವೆಯ
ಚೆನ್ನಾಗಿ ತಡೆದಂತೆ ತಡೆಯಲಿಲ್ಲವೊ ನಾನು6
ವಸುದೇವ ದೇವಕಿ ಮುಖ್ಯರಂತೆ ನಿನ್ನ ಮಾ-
ನುಷನೆಂದು ನಾನೇನು ತಿಳಿದುಕೊಂಡಿಲ್ಲ 7
ಮಲಗಿದ್ದ ಸಮಯದ ಕಂಡು ಬಲಿಯು ಬಂದು
ಮೌಲಿಯ ಕದ್ದಂತೆ ಕದ್ದುಕೊಂಡಿಲ್ಲ8
ರಾಜೇಶಹಯಮುಖ ಭಜಕರೊಳಗೆ ಮತ್ತೆ
ಋಜುಗಳಲ್ಲದೆ ನಿತ್ಯ ಭಕ್ತರಾರಿಹರು 9
***
No comments:
Post a Comment