Saturday, 1 May 2021

ಸೂರ್ಯ ಯತಿವರ್ಯ ಮಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ ankita shyamasundara susheelendra teertha stutih

susheelendra teertha rayara mutt yati 1926 stutih

ರಾಗ : ಶಂಕರ ತಾಳ : ಕೇರ್ವಾ


ಸೂರ್ಯ ಯತಿವರ್ಯ । ಮ ।

ಧ್ವಾರ್ಯರ ಸುಮತ 

ಸರೋಜಕೆ ಸುಶೀಲೇಂದ್ರ ।। ಪಲ್ಲವಿ ।।


ಬುಧ ಜನ ವಂದಿತ ।

ಸುಧಿ ಸುವ್ರತೀಂದ್ರರ ।

ಸದಮಲಘನ ಸದ್ ।

ಹೃದಯಾಕಾಶಕೆ ।। ಚರಣ ।।

ಧರಣಿ ಸುರಾಗ್ರಣಿ ।

ಗುರು ಸುಕೃತೀಂದ್ರರ ।

ಸುರಚಿರ ಸರಸಿಜ ।

ಕರ ಪೂರ್ವಾದ್ರಿಗೆ ।। ಚರಣ ।।


ಭೂಸುರ ಸೇವಿತ ।

ಪೂಶರ ವರ್ಜಿತ ।

ಭಾಸುರವರ । ಸಂ ।

ನಾಸ ಸುಛಾಯಕೆ ।। ಚರಣ ।।


ಬಗೆ ಬಗೆಯಿಂದಯಿಂದಲಿ ।

ನಿಗಮೋಕ್ತಿಯಲಿ ।

ರಘುವರನರ್ಚಿಪ ।

ಸುಗುಣವೆಂಬ ಹಗಲಿಗೆ ।। ಚರಣ ।।


ಶ್ಯಾಮಸುಂದರನ ।

ನಾಮವ ಪೊಗಳಿದ ।

ಪಾಮರ ಮತಿ ಜನ ।

ಸ್ತೋಮ ಯಾಮಿನಿಗೆ ।। ಚರಣ ।।

****


No comments:

Post a Comment