Saturday, 1 May 2021

ರಕ್ಷಿಸೆನ್ನನು ದಯಾಂಬುಧೇ ರಕ್ಷಿಸೆನ್ನನ್ನು ankita pranesha vittala akshobhya teertha stutih

 ರಾಗ : ಶಂಕರಾಭರಣ                                   ತಾಳ : ಅಟ್ಟ 


ರಕ್ಷಿಸೆನ್ನನು ದಯಾಂಬುಧೇ । ರಕ್ಷಿಸೆನ್ನನ್ನು      ।। ಪಲ್ಲವಿ ।।


ರಕ್ಷಿಸೆನ್ನನು ಪಾಪ ಶಿಕ್ಷಿಸಿ ಕರುಣದಿ ।

ಪಕ್ಷಿವಾಹನ ಪ್ರಿಯ ಅಕ್ಷೋಭ್ಯ ಮುನಿಪಾ          ।। ಅ. ಪ ।।


ಅನುಮಾನವಿಲ್ಲದೆ ಮಣಿದೆ ತವಾಂಘ್ರಿಯ ।

ಅನಘ ಶ್ರೀ ಮಾಧವ ಮುನಿ ಕರ ಜಾತ            ।। ಚರಣ ।।


ಜಯಮುನಿ ವಂದಿತ ಜಯವಂತ ನೀನೇವೆ ।

ದಯಮಾಡು ದುಃಖ ಬಯಲಾಗಲರಿಯೆ            ।। ಚರಣ ।।


ಪ್ರಾಣೇಶವಿಠ್ಠಲನ ಧ್ಯಾನದೊಳಗೆ ।

ಮನ ತಾನಿರುವಂದದಿ ಪೋಣಿಸು ಜವದಿ           ।। ಚರಣ ।।

****

No comments:

Post a Comment