ರಾಗ : ಕಾಂಬೋಧಿ ತಾಳ : ಆದಿ
ಪುಂಡಲೀಕ ದಳ ನಯನ ।
ಪುಂಡಲೀಕ ವರದ ವಿಠಲ ನಿಮ್ಮ ।
ಕೊಂಡಾಡಲಳವೆ ಪಾಂಡುರಂಗರಾಯ ।। ಪಲ್ಲವಿ ।।
ಹದಿನಾಲ್ಕು ಲೋಕವನ್ನು ನಿನ್ನ ।
ಉದರದಲ್ಲಿ ತಾಳಿದಂಗೆ ।
ಸುದತಿ ರುಕ್ಮಿಣಿ ತನ್ನ ಕುಚಗಳಿಂದ ।
ಚದುರೆ ನಿನ್ನ ಎತ್ತಿ ಕುಣಿದ ।
ಪದುಮಾಕ್ಷಿ । ಬ ।
ಲ್ಲಿದಳೋ ನೀ ಬಲ್ಲಿದನೋ ।। ಚರಣ ।।
ಭೂಮಿ ಈರಡಿ ಮಾಡಿ ।
ವ್ಯೋಮಕೊಂದು ಪದವಿತ್ತೇ ।
ರೋಮ ರೋಮದಲಿ ಬ್ರಹ್ಮರುದ್ರರಿರಲು ।
ಸ್ವಾಮಿ ನಿನ್ನ ಪ್ರೆಮ್ಮ ತಾಳ್ದ ।
ಕೋಮಲಾಂಗಿ ಬಲ್ಲಿದಳೋ
ನೀ ಬಲ್ಲಿದನೋ ।। ಚರಣ ।।
ಶೃಂಗಾರವಾದ ನಿನ್ನ ।
ಮಂಗಳ ಶ್ರೀಪಾದವನ್ನು ।
ಹಿಂಗದೆ ಭಜಿಸುವ ಸಲಿಗೆಯಿತ್ತೆಯೋ ।
ರಂಗಾ ಅಚಲಾನಂದವಿಠಲ ನಿನ್ನ ।
ಸಂಗ ಸುಖಿ ಬಲ್ಲಿದಳೋ ।
ನೀ ಬಲ್ಲಿದೆಯೋ ।। ಚರಣ ।।
****
No comments:
Post a Comment